ತಿರುವನಂತಪುರ : ಶಬರಿಮಲೆ ದೇವಾಲಯ ಪ್ರವೇಶಿಸಲು ಕೇರಳದ ಕೊಚ್ಚಿಗೆ ಬಂದಿದ್ದ ಮಹಿಳಾ ಹೋರಾಟಗಾರ್ತಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ದಾಳಿ ನಡೆಸಿರುವ ಘಟನೆ ನಡೆದಿದೆ. ಮಹಿಳಾ ಹೋರಾಟಗಾರ್ತಿ ಬಿಂದು ಅಮ್ಮಿನಿ ದಾಳಿಗೊಳಗಾದ ಮಹಿಳೆ. ಆಕೆಯ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ವ್ಯಕ್ತಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಿಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ಆಕೆಯನ್ನು ಬೇರೆಡೆಗೆ ಕರೆದೊಯ್ಯಲಾಯಿತು.

ಅತ್ತ ಮಹಾರಾಷ್ಟ್ರದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಕುಡಾ ನಾನು ಈ ಬಾರಿ ಶಬರಿಮಲೆ ಪ್ರವೇಶಿಸಿಯೇ ತೀರುವೆ ಎಂದು ಪಟ್ಟು ಹಿಡಿದಿದ್ದು, ಇಂದು ತೃಪ್ತಿ ದೇಸಾಯಿ ಸೇರಿದಂತೆ ಇತರೆ 5 ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಮುಂದಾಗಿದ್ದಾರೆ.
