ಕೈಕಂಬ:ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡ(ರಿ) ಶ್ರೀರಾಮ್ ಸಭಾಂಗಣ ಗುರುಪುರ ಕೈಕಂಬ ಇದರ ದ್ವಿತೀಯ ವಾರ್ಷಿಕೋತ್ಸವ ತಕಧಿಮಿ-2019 ನ.23 ರಂದು ಶನಿವಾರ ಸಂಜೆ 3.30 ರಿಂದ ರಾತ್ರಿ 12 ರವರೆಗೆ ಶ್ರೀ ಗಣೇಶ್ ಕಟ್ಟೆ ಗುರುಪುರ ಕೈಕಂಬ ಇಲ್ಲಿ ನಡೆಯಲಿದೆ.

ಆಶೀರ್ವಚನವನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ನೀಡಲಿದ್ದಾರೆ.ಅಧ್ಯಕ್ಷತೆಯನ್ನು ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಪಟ್ಲ ಸತೀಶ್ ಶೆಟ್ಟಿ ವಹಿಸಲಿದ್ದಾರೆ.ಉದ್ಘಾಟನೆಯನ್ನು ನಿವೃತ್ತ ನೌಕದಳ ಸೇನಾನಿ ವಿಕ್ರಮ್ ದತ್ತ ಮಂಗಳೂರು ಮಾಡಲಿದ್ದಾರೆ. ಕೈಕಂಬ ಶ್ರೀರಾಮ್ ಹೋಟೆಲ್ ಮಾಲಕ ಹರಿರಾವ್ ಕೈಕಂಬ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಯಕ್ಷಸಂಗಮ ಮೂಡಬಿದ್ರೆ ಸಂಚಾಲಕರು ಶಾಂತರಾಮ ಕುಡ್ವ, ಖ್ಯಾತ ತುಳು ಚಲನಚಿತ್ರ ನಟ ಅರವಿಂದ ಬೋಳಾರ್, ಗಣೇಶೋತ್ಸವ ಸೇವಾಸಮಿತಿ ಕೈಕಂಬ ಅಧ್ಯಕ್ಷರು ವಿನೋದ್ ಮಾಡ, ಯಕ್ಷಕಲಾ ಪೊಳಲಿ ಸಂಚಾಲಕರು ವೆಂಕಟೇಶ ನಾವಡ,ಮೂಡಬಿದ್ರೆ ಬಿಮಲ್ ಕನ್‍ಸ್ಟ್ರಕ್ಷನ್ ಮಾಲಕ ಪ್ರವೀಣ್ ಕುಮಾರ್, ಉಪಸ್ಥಿತರಿರುವರು. ಅಭ್ಯಾಗತರು ಕೈಕಂಬ ಶ್ರೀನಿವಾಸ್ ಎಂಟರ್‍ಪ್ರೈಸಸ್ ಮಾಲಕ ಶ್ರೀಧರ್ ರಾವ್, ಕೈಕಂಬ ಆಶಿತ್ ಎಂಟರ್‍ಪ್ರೈಸಸ್ ಮಾಲಕ ರಾಜೀವ ಕೆ.ಕೈಕಂಬ ಪೂಜಾ ಮೆಡಿಕಲ್ಸ್ ಮಾಲಕ ಉಮೇಶ್ ಆರ್.ಭಂಡಾರಿ, ಪೊಂಪೈ ಆಂಗ್ಲಮಾಧ್ಯಮ ಶಾಲೆ ಪ್ರಾಂಶುಪಾಲರು ಮಹೇಶ್ ಶೆಟ್ಟಿ, ವಿಜೇತ ಕಾಂಪ್ಲೆಕ್ಸ್ ಮಾಲಕ ಜಯರಾಮ್ ಶೆಟ್ಟಿ ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ಹರಿನಾರಾಯಣ ಬೈಪಡಿತ್ತಾಯ ಲೀಲಾವತಿ ಬೈಪಡಿತ್ತಾಯ ಇವರನ್ನು ಸಮ್ಮಾನಿಸಲಿರುವರು. ಯಕ್ಷಗಾನ ನಾಟ್ಯ ಗುರು ರಕ್ಷಿತ್ ಶೆಟ್ಟಿ ಪಡ್ರೆ ಇವರನ್ನು ಗೌರವಿಸಲಾಗುವುದು. ಬಿ. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಸಾಂಸ್ಕ್ರತಿಕ ಕಾರ್ಯಕ್ರಮ 3.30ರಿಂದ 4.30ರ ತನಕ ತಕಧಿಮಿ ಸಂಸ್ಥೆಯ ಗಾನ-ಯಾನ ತಂಡದ ಭಾಗವತಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಸ್ತುತಿ ಪದ್ಯ, 4.30ರಿಂದ 5.30ರ ತನಕ ತಕಧಿಮಿ ಸಂಸ್ಥೆಯ ನಾದಪ್ರೀಯ ತಂಡದ ಸದಸ್ಯರು ಮತ್ತು ವಿದ್ಯಾರ್ಥಿಗಳಿಂದ ಭಕ್ತಿ ಕುಸುಮ, ಸಂಜೆ 5.30 ರಿಂದ 6 ರ ತನಕ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಸಂಜೆ 7.30ರಿಂದ ರಾತ್ರಿ 12 ರವರೆಗೆ ಯಕ್ಷಗುರು ನಾಟ್ಯಮಯೂರಿ ರಕ್ಷಿತ್ ಶೆಟ್ಟಿ ಪಡ್ರೆಯವರ ನಿರ್ದೇಶನದಲ್ಲಿ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಕುಮಾರ ಸಂಭವ-ಶ್ವೇತ ಕುಮಾರ ರಕ್ತರಾತ್ರಿ ಜರುಗಲಿದೆ.
