ಕೈಕಂಬ: “ಮಾದುಕೋಡಿದ ಕರಿಯಜ್ಜೆ” ತುಳು ಭಕ್ತಿ ಗೀತೆ….ನ.೧೯ರಂದು ಶ್ರೀ ಕ್ಷೇತ್ರ ಮಾದುಕೊಡಿಯಲ್ಲಿ ಸ್ವಾಮಿ ಕೊರಗಜ್ಜನ ಕ್ಷೇತ್ರದಲ್ಲಿ ಗುರೂಜಿ ವಿಜಯ ಸುವರ್ಣ ಪೊಳಲಿ ಇವರ ದಿವ್ಯ ಹಸ್ತದಲ್ಲಿ ‘ಮಾದುಕೋಡಿದ ಕರಿಯಜ್ಜೆ’ ತುಳು ಭಕ್ತಿ ಗೀತೆಯ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಧುಕೋಡಿ ಸುಂದರ್ ಬೆಳ್ಚಡ ಉಪಸ್ಥಿತರಿದ್ದರು.
ಡಮರುಗ ಮ್ಯಾಜಿಕಲ್ ಸೌಂಡ್ಸ್ ನಿರ್ಮಾಣದಲ್ಲಿ ಗಾನ ಕೋಗಿಲೆ -ಹಾಸ್ಯ ಚಕ್ರವರ್ತಿ ಭೋಜರಾಜ್ ವಾಮಂಜೂರ್ ಭಕ್ತಿಗೀತೆಗೆ ಗಾಯನ ನೀಡಿದ್ದಾರೆ.ಪುರನ್ ಶೆಟ್ಟಿಗಾರ್ ಮುಂಬೈ ಇವರ ಸಂಗೀತ ನಿರ್ದೇಶನದಲ್ಲಿ ತುಳುನಾಡ ಕಲಶ ಜಿ.ಎಸ್.ಗುರುಪುರ ಇವರು ಸಾಹಿತ್ಯ ನೀಡಿದ್ದಾರೆ.



