ಕೈಕಂಬ :ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಿಂದಾಗಿ ಸೋಮವಾರ ನಡೆಯಬೇಕಾಗಿದ್ದ, ಮುತ್ತೂರು ಗ್ರಾಮ ಪಂಚಾಯತ್ ನ ಕೆ ಡಿ ಪಿ ಸಭೆ ರದ್ದುಗೊಳಿಸಲಾಯಿತು. ಮುತ್ತೂರು ಗ್ರಾಮ ಪಂಚಾಯತ್ ಮಟ್ಟದ , ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸೋಮವಾರ ಬೆಳಿಗ್ಗೆ 10,:30ಕ್ಕೆ, ಕುಳವೂರಿನ, ಗೆಂದ ಡ್ಪು ಸಮುದಾಯ ಭವನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಈ ಬಗ್ಗೆ ಸಂಬಂಧ ಪಟ್ಟ, ಸುಮಾರು ಇಪ್ಪತ್ತು ಇಲಾಖೆಗಳಿಗೆ ಮಾಹಿತಿಯನ್ನೂ ನೀಡಲಾಗಿತ್ತು.
ಆದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸ್ಥಳೀಯ ಬ್ಯಾಂಕೊಂದರ ಮ್ಯಾನೇಜರ್, ಹೊರತುಪಡಿಸಿ, ಯಾವುದೇ ಇಲಾಖೆಯ ಅಧಿಕಾರಿಗಳು ಸಭೆಗೆ ಆಗಮಿಸಲಿಲ್ಲ. ಕೆಲವು ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಧ್ಯಾಹ್ನ ಹನ್ನೆರಡು ಗಂಟೆಯ ವರೆಗೆ ಕಾದರೂ ಯಾವ ಅಧಿಕಾರಿಯೂ ಸಭೆಗೆ ಆಗಮಿಸುವ ಸೂಚನೆ ಕಾಣಲಿಲ್ಲ.ಅಧಿಕಾರಿಗಳು ಬರಲಿ, ಆನಂತರ ಸಭೆಗೆ ಹೋಗುವದೆಂದು ಕಾದಿದ್ದ ಕೆಲವು ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಅಧ್ಯಕ್ಷರು ಕೂಡ, ಅಧಿಕಾರಿಗಳು ಇಲ್ಲ ಎಂದು ಸಭೆಗೆ ಆಗಮಿಸಲಿಲ್ಲ. ಮೊದಲೇ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಸಭೆಗೆ ಬಾರದಿರುವುದರ ಬಗ್ಗೆ ಪಂಚಾಯತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಒಂದು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಕುರಿತಾದ ಸಭೆಯನ್ನು, ಲಘುವಾಗಿ ಪರಿಗಣಿಸಿ, ನಿರ್ಲಕ್ಷಿಸಿದ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವ ಬಗ್ಗೆ ಮತ್ತು ಸಭೆಯನ್ನು ಮುಂದೂಡುವ ನಿರ್ಣಯವನ್ನು ತೆಗುದುಕೊಂಡು, ಸಭೆಯನ್ನು ಮುಂದೂಡಲಾಯಿತು
