ಕೈಕಂಬ :ಕ್ರೀಡೆಯಿಂದ ಭವಿಷ್ಯ ಉಜ್ವಲಗೊಳಿಸಬಹುದು. ಕ್ರೀಡಾಳುಗಳಲ್ಲಿ ಛಲವಿರಬೇಕು. ಸೋಲಿನ ಬಗ್ಗೆ ಚಿಂತಿಸಬಾರದು. ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಿದಾಗ, ಕಲಿತ ಶಾಲೆಯ ಮರೆಯಬಾರದು ಎಂದು ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕøತ ಉದಯ ಚೌಟ ಹೇಳಿದರು. ಅವರು ಗಂಜಿಮಠದ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾ ಕೂಟ(2019-2020) ನ. 18ರಂದು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ರಾಜ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಯತಿರಾಜ್ ಶೆಟ್ಟಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಮಮತಾ ವೈ ಶೆಟ್ಟಿ, ಮುಖ್ಯ ಶಿಕ್ಷಕಿ ಪ್ರವೀಣಾ ಶೆಟ್ಟಿ ಹಾಗೂ ಶಾಲಾ ಶಿಕ್ಷಕ/ಶಿಕ್ಷಕೇತರ ವೃಂದ, ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಲಲಿತಾ ನಿರೂಪಿಸಿದರು. ಅಶ್ವಿನಿ ರಾವ್ ಬಹುಮಾನ ವಿಜೇತರ ಪಟ್ಟಿ ಓದಿದರು.ಶಿಕ್ಷಕಿ ಶಾಂತಿ ಸ್ವಾಗತಿಸಿ ಶಿಕ್ಷಕಿ ಸೌಮ್ಯ ವಂದಿಸಿದರು.



