ಕೈಕಂಬ: ಪೊಳಲಿ ಸೇವಾ ಸಹಕಾರ ಸಂಘ ಇದರ ಅಮ್ಮುಂಜೆ ನೂತನ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಸಂದರ್ಭ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಪೊಳಲಿ ಸೇವಾ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ,ಮಾಜಿ ಸಚಿವ ಬಿ.ರಮಾನಾಥ ರೈ ,ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಮಾಜಿ ಸಚಿವ ಅಮರನಾಥ ಶೆಟ್ಟಿ ಕಲ್ಪವೃಕ್ಷ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಪದ್ಮಶೇಖರ ಜೈನ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಪ್ರವೀಣ್ ಬಿ.ನಾಯ್ಕ್, ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಯಶವಂತ ಪೂಜಾರಿ, ತಾಪಂ ಸದಸ್ಯ ಶಿವಪ್ರಸಾದ್, ಅಮ್ಮುಂಜೆ ಗ್ರಾಪಂ ಅಧ್ಯಕ್ಷೆ ಪ್ರೇಮಾ ಲತಾ, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಕೇಶವ ಕಿಣಿ, ಪುರುಷೋತ್ತಮ ಎಸ್. ಪಿ., ನಿರ್ದೇಶಕರಾದ ಯೋಗೀಶ್, ಅಬೂಬಕರ್, ಗೋಪಾಲ್ ಅಂಚನ್, ವಿಜಯ ಫರ್ನಾಂಡೀಸ್ ಮತ್ತಿತರು ಇದ್ದರು.
