ವಾಮಂಜೂರು : ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲು ವಾರ್ಡ್ ಸಂಖ್ಯೆ ೨೦ರ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿಯವರ ಚುನಾವಣಾ ಪ್ರಚಾರ ಕಚೇರಿ ತಿರುವೈಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಕರ್ಕೇರರ ಕಟ್ಟಡದಲ್ಲಿ ನ. ೪ರಂದು ಉದ್ಘಾಟನೆಗೊಂಡಿತು.gur-nov-4-prathibha r shetty-2

ಈ ಸಂದರ್ಭದಲ್ಲಿ ಗುರುಪುರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ತಿರುವೈಲ್ ವಾರ್ಡಿನ ಎಲ್ಲ ಎಂಟು ಬೂತುಗಳಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನ ಪ್ರಚಾರ ಕಾರ್ಯ ನಡೆಸಬೇಕು. ಈ ವಾರ್ಡಿನಲ್ಲಿ ಮಾಜಿ ಶಾಸಕ ಮೊÊದಿನ್ ಬಾವ ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ. ಮಹಿಳೆಯರ ಮನಸ್ಸು ಪರಿವರ್ತಿಸಿ ಮತ ಗಳಿಸಲು ಪ್ರಯತ್ನಿಸಿ ಎಂದರು.gur-nov-4-prathibha r shetty-1

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮೆಲ್ವಿನ್ ಲೋಬೊ, ಗಣೇಶ್ ಪೂಜಾರಿ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಕರ್ಕೇರ, ಮಾಜಿ ಕಾರ್ಪೊರೇಟರ್ ಮೀರಾ, ಸ್ಥಳೀಯರಾದ ಜಯಂತಿ ಡಿ. ನಡುಗುಡ್ಡೆ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ನವೀನ್‌ಚಂದ್ರ ಶೆಟ್ಟಿ ತಿರುವೈಲುಗುತ್ತು, ಕಾಂತಪ್ಪ ಪೂಜಾರಿ, ಇಮ್ತಿಯಾಜ್ ಮೂಡುಶೆಡ್ಡೆ, ಕೃಷ್ಣಪ್ಪ ಸುವರ್ಣ ದೇವಸ, ರಾಘವ ಗೌಡ ತಿರುವೈಲು, ಜೆಸಿಂತಾ ಡಿ’ಸೋಜ, ಜಲ್ಸನ್ ಡಿ’ಸೋಜ, ರಮ್ಲತ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *