ಬಂಟ್ವಾಳ: ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ವಿವಾದಿತ ಎಎಸ್ಐ ಎಂದೇ ಬಿಂಬಿತವಾಗಿರುವ ಎಎಸ್ಐ ಬಾಲಕೃಷ್ಣ ಅವರು ಸಾರ್ವಜನಿಕವಾಗಿ ಬೈಕ್ ಸವಾರರೊಬ್ಬರ ಕತ್ತಿನಪಟ್ಟಿ ಹಿಡಿದು  ಎಳೆದಾಡಿರುವ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ  ಸಾರ್ವಜನಿಕ ಮತ್ತು ಚಾಲಕ ಸಮುದಾಯದಿಂದ  ಟ್ರಾಫಿಕ್ ಪೊಲೀಸರ ವಿರುದ್ದ ವ್ಯಾಪಕ ಆಕ್ರೋಶ,ಟೀಕೆ ವ್ಯಕ್ತವಾಗಿದೆ.

15-59-49-3-7 ಗುರುವಾರ ಮೆಲ್ಕಾರ್ ಸಮೀಪದ ಗುಡ್ಡೆಯಂಗಡಿ  ರಸ್ತೆಯಲ್ಲಿ ಎಎಸ್ಐ ಬಾಲಕೃಷ್ಣ ಮತ್ತು ಸಿಬ್ಬಂದಿ ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭ ಸಂಚಾರ ನಿಯಮ ಉಲ್ಲಂಘನೆ  ಆರೋಪದಲ್ಲಿ ಬೈಕ್ ಸವಾರರನ್ನು ತಡೆದು ನಿಲ್ಲಿಸಿದ್ದರೆನ್ನಲಾಗಿದೆ. ಆಗ ದಂಡ ಪಾವತಿ ವಿಚಾರದಲ್ಲಿ ಬೈಕ್ ಸವಾರ ಹಾಗೂ ಎಎಸ್ ಐ ಬಾಲಕೃಷ್ಣ ಅವರ ನಡುವೆ ವಾಗ್ವಾದ ನಡೆದಿದೆ.  ಇಲಾಖಾ ವಾಹನದಲ್ಲಿ ಕುಳಿತಿದ್ದ ಎಎಸ್ ಐ ಅವರು  ಆವೇಶಭರಿತರಾಗಿ ರಸ್ತೆಗೆ ಇಳಿದು ಬೈಕ್ ಸವಾರನ ಕತ್ತಿನಪಟ್ಟಿ ಹಿಡಿದು ಎಳೆದಾಡಿದ್ದಾರೆ.ಇದನ್ನು ಬೈಕ್ ನ ಸಹಸವಾರ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದಾನೆ. ಎಎಸ್ಐ ಬಾಲಕೃಷ್ಣ ಮತ್ತು ಸಿಬಂದಿಯ ಈ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಚಾಲಕ ಸಮುದಾಯ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ,ಆಕ್ರೋಶ ಭರಿತ ಟಿಪ್ಪಣಿಗಳು ಹರಿದಾಡಲಾರಂಭಿಸಿದೆ.
ತನಿಖೆಗೆ ಆದೇಶ: ಟ್ರಾಫಿಕ್ ಎಎಸ್ಐ ಮತ್ತು ಬೈಕ್ ಸವಾರನ ನಡುವಿನ ವಾಗ್ವಾದ,ಕತ್ತಿನಪಟ್ಟಿಹಿಡಿದು ಎಳೆದಾಡುವ ದೃಶ್ಯ ವೈರಲ್ ಅಗುತ್ತಿದ್ದಂತೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಘಟನೆಯ ಬಗ್ಗೆ ತನಿಖೆ ನಡೆಸಿ ವಾಸ್ತವಾಂಶದ ವರದಿ ನೀಡಲು ಬಂಟ್ವಾಳ ಉಪವಿಭಾಗದ  ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಅದೇಶಿಸಿದ್ದಾರೆ.ಈ ವರದಿಯಾಧಾರದಲ್ಲಿ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *