ಬಂಟ್ವಾಳ:ತಾಲೂಕಿನ   ಪಂಜಿಕಲ್ಲು ಗ್ರಾಮ ಪಂಚಾಯತ್ ದಡ್ಡಲಕಾಡು ವಾಡ್೯ 2 ಕ್ಕೆ ನ.12 ರಂದು ನಡೆಯುವ ಉಪಚುನಾವಣೆಗೆ 4 ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾಗಿ ಡಿ.ಪ್ರವೀಣ್ ಮತ್ತು ಡಮ್ಮಿ ಅಭ್ಯರ್ಥಿಯಾಗಿ ಆಶ್ವಿನ್‌ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.ಹಾಗೆಯೇ  ಸುರೇಶ್ ಪೂಜಾರಿ ಜೋರ ರವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದು,ಜಗದೀಶ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು,ಶನಿವಾರ ನ. 2 ರಂದು ನಾಮಪತ್ರದ ಪರಿಶೀಲನೆ ನಡೆಯಲಿದೆ.ನ.4 ನಾಮಪತ್ರ ವಾಪಾಸ್ ಪಡೆಯಲು ಕೊನೆದಿನವಾಗಿದೆ. ದಡ್ಡಲಕಾಡು ವಾಡ್೯ 2 ರ ನಿಕಟಪೂರ್ವ ಸದಸ್ಯ ಕೇಶವ ಗೌಡ ಅವರಿಗೆ ಸರಕಾರಿ ಉದ್ಯೋಗ ದೊರೆತ ಹಿನ್ನಲೆಯಲ್ಲಿ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *