ಬಂಟ್ವಾಳ:ತಾಲ್ಲೂಕಿನ ಇರಾ ಗ್ರಾಮದ ಕಲ್ಲಾಡಿ ಕೆಂಜಿಲಪದವು ಕದ್ರಿಜ್ಜ ಮೂಲಸ್ಥಾನದಲ್ಲಿ ನಲಿಕೆ ಸಮುದಾಯ ವತಿಯಿಂದ ರಾಯಿ ಕೈತ್ರೋಡಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ ನಲಿಕೆ ಇವರಿಗೆ ಮಂಗಳವಾರ ಹುಟ್ಟೂರ ಸನ್ಮಾನ ನೆರವೇರಿಸಿದರು.

31btl-Lokesh
ಬಾಲ್ಯದಿಂದಲೇ ದೈವಾರಾಧನೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಇವರು ಸುಮಾರು 12ಕ್ಕೂ ಮಿಕ್ಕಿ ದೈವಗಳ ನರ್ತನ ಕರಗತ ಮಾಡಿಕೊಂಡಿದ್ದಾರೆ. ಪ್ರಸಕ್ತ ರಾಯಿ ಕೈತ್ರೋಡಿ ಕೊರಗಜ್ಜ ಕ್ಷೇತ್ರ ಮುನ್ನಡೆಸುತ್ತಿರುವ ಇವರಿಗೆ ಮೈಸೂರು ನೇಷನಲ್ ವರ್ಚುವಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಗೌರವ ಸಲ್ಲಿಸಿದೆ ಎಂದು ಗುರಿಕಾರ ನೋಣಯ ಅವರು ತಿಳಿಸಿದರು. ಕದ್ರಿಜ್ಜ ಕುಟುಂಬಿಕರು ಸಹಿತ ಪ್ರಮುಖರಾದ ಚಂದಪ್ಪ, ಈಶ್ವರ, ನಾರಾಯಣ, ಯಮುನಾ ರಾಮ ನಲಿಕೆ, ಚಂದ್ರಾವತಿ ಲೋಕೇಶ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *