ಉಡುಪಿ; ಸಾರ್ವಜನಿಕ ವಲಯದಲ್ಲಿ ಕಳೆದ ಒಂದು ವರ್ಷಗಳಿಂದ ಭೀತಿಯ ವಾತಾವರಣ ಸೃಷ್ಠಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ವಶಕ್ಕೆ ಪಡೆದು ಮಲ್ಪೆ ಠಾಣೆಯ ಸಹಕಾರದೊಂದಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದಲ್ಲಿ ಕಳೆದ ಜೂ.4 ರಂದು ಸುರಕ್ಷಿತ ನೆಲೆಕಲ್ಪಿಸಿದ್ದರು. ವಿಶು ಶೆಟ್ಟಿ ಅವರ ಸಮಯಪ್ರಜ್ಞೆಯಿಂದ ಅಂದು ಭಯದ ವಾತಾವರಣಕ್ಕೆ ತೆರೆಬಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದ್ದರು. ಇವಾಗ ಯುವಕನು ಗುಣಮುಗನಾಗಿ ಹೆತ್ತವರ ಮಡಿಲು ಸೇರಿದ್ದಾನೆ.

d9dd7a59-7831-434f-8259-cd611cd1ea84

ಶ್ರೀಸಾಯಿನಿಕೇತನ ಸೇವಾಶ್ರಮದ ಸೇವಾ ಕಾರ್ಯ ಶ್ಲಾಘನೀಯ ಆಶ್ರಮ ಸಂಚಾಲಕರಾದ ಡಾ. ಉದಯ ಕುಮಾರ್ ಹಾಗೂ ಡಾ. ಶಾರದ ಉದಯ ಕುಮಾರ್ ದಂಪತಿಗಳು ಯುವಕನಿಗೆ ಸರಿಯಾದ ಚಿಕಿತ್ಸೆಗೆ ಒಳಪಡಿಸಿದ್ದರು. ಯುವಕನ ಸತತ 4 ತಿಂಗಳುಗಳ ಕಾಲದ ಪರಿಶ್ರಮದಿಂದ ಪೂರ್ಣ ಗುಣಮುಖನಾಗಿಸಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ಯಾವೊಂದು ವಿವರಗಳ ನೀಡಲು ಶಕ್ತನಾಗಿರದ ಯುವಕನ ವಿಳಾಸ ಪತ್ತೆಗೊಳಿಸಿ ಹೆತ್ತವರ ವಶಕ್ಕೆ ಯುವಕನನ್ನು ನೀಡಿದ್ದಾರೆ. ಯುವಕ ಮಧ್ಯಪ್ರದೇಶ ರಾಜ್ಯದ ಸಚೇಂದ್ರ ಚೌಧರಿ(25 ವ) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಗ ಮನೆಯಿಂದ ಕಾಣೆಯಾಗಿದ್ದ, ಈ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವು ಎಂದು ಯುವಕನ ತಂದೆ ಹೇಳಿಕೊಂಡಿದ್ದಾರೆ. ಮಗನು ಸುರಕ್ಷಿತನಾಗಿರುವುದನ್ನು ಕಂಡು ತಂದೆ ಸಂತಸ ವ್ಯಕ್ತಪಡಿಸಿ, ವಿಶು ಶೆಟ್ಟಿ ಹಾಗೂ ಮಂಜೇಶ್ವರದ ಶ್ರೀಸಾಯಿನಿಕೇತನ ಸೇವಾಶ್ರಮದ ಸೇವಾ ಕಾರ್ಯಕ್ಕೆ ಯುವಕನ ತಂದೆ ಧನ್ಯವಾದ ಸಲ್ಲಿಸಿದ್ದಾನೆ.

ಯುವಕನ ಪರಿಷ್ಥಿತಿ ಹೀಗಿತ್ತು..!
ಕಾಪು, ಉಡುಪಿ, ಬ್ರಹ್ಮಾವರ, ಸಾಲಿಗ್ರಾಮ, ಕೋಟ, ಪ್ರದೇಶಗಳಲ್ಲಿ ಮಾನಸಿಕ ಯುವಕನ ಅಲೆದಾಟ ಇತ್ತು. ಒಂದೊಂದು ಊರಲ್ಲಿ ಒಂದಿಷ್ಟು ದಿನ ಠಿಕಾಣಿ ಹೂಡುತ್ತಿದ್ದನು. ಕೊಳಕು ಬಟ್ಟೆ ಧರಿಸಿ, ನಡು ರಾತ್ರಿ, ತಡ ರಾತ್ರಿ ಸಮಯದಲ್ಲಿ ರಸ್ತೆಗಳಲ್ಲಿ ಅಲೆದಾಡುತ್ತಿದ್ದನು. ಹಗಲಲ್ಲಿ ಮಹಿಳೆ, ಯುವತಿಯರನ್ನು ಹಿಂಬಾಲಿಸಿದ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು. ಯುವಕನ ಅಸಹಾಯಕತೆ, ಉಪಟಳದ ಬಗ್ಗೆ ಬಹಳಷ್ಟು ದೂರುಗಳು ವಿಶು ಶೆಟ್ಟಿ ಅವರಿಗೆ ಸಾರ್ವಜನಿಕರಿಂದ ಬಂದಿದ್ದವು. ಹಲವು ಬಾರಿ ಮಾನಸಿಕ ಯುವಕನ ವಶಕ್ಕೆ ಪಡೆಯಲು ಯತ್ನಿಸಿದ್ದರು. ಯುವಕ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಪ್ರಯತ್ನಗಳು ವಿಫಲವಾಗಿದ್ದವು. ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೂ ಮೌಖಿಕ ದೂರಗಳನ್ನು ನೀಡಿದ್ದರೂ ಇಲಾಖೆಗಳು ಸ್ಪಂದಿಸಿರಲಿಲ್ಲ. ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಜೂ.4 ರಂದು ಬೆಳಿಗ್ಗೆ ಮಲ್ಪೆಯಲ್ಲಿ ಯುವಕನು ಕಂಡು ಬಂದಾಗ, ಆತನ ವಶಕ್ಕೆ ಪಡೆದ ವಿಶು ಶೆಟ್ಟಿ ಅವರು, ವರ್ಷಗಳಿಂದ ಮೈಗೆ ನೀರು ತಾಗದೆ ನಾರುತ್ತಿದ್ದ ಯುವಕನ ಸ್ನಾನ ಮಾಡಿಸಿ, ಬದಲಿ ಬಟ್ಟೆ ತೊಡಿಸಿ, ಅನ್ನ ಆಹಾರ ಇಲ್ಲದೆ ಬಳಲಿದ ಯುವಕನಿಗೆ ಆಹಾರದ ವ್ಯವಸ್ಥೆಗೊಳಿಸಿದ್ದರು.

9325153d-2fd4-40bb-8eb2-d0993c25c621

ಅಂದು ವಿಶು ಶೆಟ್ಟಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದ ಸಂಚಾಲಕರಾದ ಡಾ.ಉದಯ್ ಕುಮಾರ್ ಭಟ್ ಅವರನ್ನು ಸಂಪರ್ಕಿಸಿ ಯುವಕನ ದಯನೀಯ ಸ್ಥಿತಿ ವಿವರಿಸಿ, ಯುವಕನಿಗೆ ಆಶ್ರಯ ಕಲ್ಪಿಸುವಂತೆ ವಿನಂತಿಸಿದ್ದರು ಸ್ಪಂದಿಸಿದ ಆಶ್ರಮ ಸಂಚಾಲಕರು ಇಲಾಖೆಯ ಕಾನೂನು ಪ್ರಕ್ರಿಯೆ ನೆಡೆಸಿ ಕರೆತರುವಂತೆ ಹೇಳಿದ್ದರು. ಮಲ್ಪೆ ಪೋಲಿಸ್ ಠಾಣೆಯ ವಿನಂತಿ ಪತ್ರದ ಜೊತೆ ಠಾಣೆಯ ಪೇದೆ ಗುರುಲಿಂಗಪ್ಪ ಅವರ ಉಪಸ್ಥಿತಿಯಲ್ಲಿ ವಿಶು ಶೆಟ್ಟಿ ಅವರು ಯುವಕನನ್ನು ತಮ್ಮದೆ ವಾಹನದಲ್ಲಿ ಮಂಜೇಶ್ವರಕ್ಕೆ ಸಾಗಿಸಿ, ಆಶ್ರಮದ ದಾಖಲು ಪ್ರಕ್ರಿಯೆ ನಡೆಸಿ ದಾಖಲಿಸಿದ್ದರು. ಯುವಕನ ರಕ್ಷಣಾ ಕಾರ್ಯಚರಣೆಯಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಶಿವಾನಂದ ಮೂಡಬೆಟ್ಟು ಅವರು ಸಹಕರಿಸಿದ್ದರು. ವಿಷಯ ತಿಳಿದ ನಿವೃತ್ತ ಬ್ಯಾಂಕ್ ಉದ್ಯೋಗಿ ಸತೀಶ್ ಶೆಟ್ಟಿ ಅಂಬಲಪಾಡಿ ಅವರು ಆಶ್ರಮಕ್ಕೆ 5 ಸಾವಿರ ದೇಣಿಗೆ ನೀಡಿದ್ದರು. ಸಂತಸದ ಸುದ್ದಿ ತಿಳಿದು, ಆಶ್ರಮ ಸಂಚಾಲಕರ, ಸಮಾಜಸೇವಕರ ಸೇವೆಗೆ ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

By Suddi9

Leave a Reply

Your email address will not be published. Required fields are marked *