ಉಡುಪಿ ; ಅಪಘಾತದಿಂದ ಮೃತಪಟ್ಟಿರುವ ಅಪರಿಚಿತ ಯುವಕನ ಕಳೇಬರದ ವಾರಸುದಾರರು ಪತ್ತೆಯಾಗದ ಕಾರಣದಿಂದ, ಸಂಚಾರ ಪೊಲೀಸ್ ಠಾಣೆ ಅವರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರದಿಂದ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮಂಗಳವಾರ ನಡೆಸಿದರು. ಪುತ್ತೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ಅ.5 ರ, ರಾತ್ರಿ 7 ಗಂಟೆ ಸುಮಾರಿಗೆ, ರಸ್ತೆ ದಾಟಲು ನಿಂತಿದ್ದ ಯುವಕನಿಗೆ, ಓಮಿನಿ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿತ್ತು. ಗಂಭೀರ ಗಾಯಗೊಂಡ ಗಾಯಾಳನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರಿಂದ ಗಾಯಾಳು ಮೃತಪಟ್ಟಿರುವುದು ತಿಳಿದು ಬಂದಿತು. ಅಂದು ವಾರಸುದಾರರ ಬರುವಿಕೆಗಾಗಿ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಡಲಾಗಿತ್ತು. ಪ್ರಕರಣವು ಸಂಚಾರಿ ಠಾಣೆಯಲ್ಲಿ ದಾಖಲಾಗಿತ್ತು. ಮೃತನ ಹೆಸರು ನಾಗೇಶ್ (40 ವ) ಎಂದಷ್ಟೇ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

bc32c44f-fe62-4891-9866-69ef6d2f2a16

ದೊರೆತಿರುವ ಮಾಹಿತಿಯನುಸಾರ ವಾರಸುದಾರರ ಪತ್ತೆಗಾಗಿ ಉಡುಪಿ ಸಂಚಾರಿ ಪೊಲೀಸ್ ಠಾಣೆ ಅವರು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದರು. ಕಾಲಮಿತಿ ಕಳೆದರೂ ಯಾರೂ ಬಾರದ ಕಾರಣದಿಂದ ಪೊಲೀಸರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ನೆರವು ಪಡೆದು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಕಾನೂನಿನಂತೆ ದಫನ ಕ್ರಿಯೆ ಮೂಲಕ ಅಂತ್ಯಸಂಸ್ಕಾರ ನೆಡೆಸಿದರು. ಖರ್ಚು ವೆಚ್ಚಗಳನ್ನು ವಿಶು ಶೆಟ್ಟಿ ಅವರು ಭರಿಸಿದರು ಅಂತ್ಯಸಂಸ್ಕಾರ ಕಾರ್ಯದಲ್ಲಿ ಸಂಚಾರ ಠಾಣೆಯ ಉಪ ನಿರೀಕ್ಷಕ ನಾರಾಯಣ, ಮುಖ್ಯಪೇದೆ ಸುಕುಮಾರ್ ಶೆಟ್ಟಿ, ಸಿಬ್ಬಂದಿ ಸಂತೋಷ್ ಉಪಸ್ಥಿತರಿದ್ದರು. ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು ಅವರು ಶ್ರಮದಾನದ ಮೂಲಕ ಇಲಾಖೆಗೆ ಸಹಕರಿಸಿದರು.

By suddi9

Leave a Reply

Your email address will not be published. Required fields are marked *