ಅಡ್ಡೂರು : ಪೊಳಲಿಗೆ ಸಮೀಪದ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಡಳಿತದ `ಸಹರಾ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್‍ಕೆಜಿ/ಯುಕೆಜಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ನಿರ್ಮಿಸಲಾದ `ಕಿಡ್ಸ್ ಕಾರ್ನರ್’ನ್ನು ದಕ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಂಗಳವಾರ ಉದ್ಘಾಟಿಸಿದರು.

gur-oct-22-kids corner udgatane-2

gur-oct-22-kids corner udgatane-5

ಪುಟಾಣಿಗಳಿಗೆ ಆಟವಾಡುವ ಸಲಕರಣೆಗಳನ್ನೊಳಗೊಂಡ ಈ ವ್ಯವಸ್ಥೆ ಸುಮಾರು ನಾಲ್ಕು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಚಾಲಕ ಎ ಕೆ ಇಸ್ಮಾಯಿಲ್, ಅಹ್ಮದ್ ಬಾವ ಅಂಗಡಿಮನೆ(ಉಪಾಧ್ಯಕ್ಷ), ಯು ಹಮೀದ್(ಕಾರ್ಯದರ್ಶಿ), ಎನ್ ಇಸ್ಮಾಯಿಲ್(ಖಜಾಂಚಿ), ಗುರುಪುರ ಗ್ರಾಪಂ ಸದಸ್ಯರಾದ ಎ ಕೆ ಅಶ್ರಫ್, ಎ ಕೆ ಮೊಹಮ್ಮದ್ ಹಾಗೂ ನೂರುದ್ದೀನ್, ಹಾಜಿ ಎಂ ಎಚ್ ಮೈಯೆದ್ದಿ, ಡಾ. ಸಿದ್ಧಿಕ್, ಆದಂ, ಡಿ ಎಸ್ ರಫೀಕ್, ಡಿ ಎಸ್ ರಹೀಂ, ಡಿ ಎಸ್ ಮೊಹಮ್ಮದ್, ಅಬ್ದುಲ್ ಅಝೀಝ್, ಜಬ್ಬರ್ ಕೆಳಗಿನಕರೆ, ಇದಿನಬ್ಬ ಕೆಳಗಿನಕರೆ, ಎ ಕೆ ಅಬ್ಬಾಸ್ ಕೆಳಗಿನಕರೆ, ಎನ್ ಇ ಮೊಹಮ್ಮದ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಕೇಶವ ಕೆ, ಶಿಕ್ಷಕರಾದ ಕಲಂದರ್, ಕವಿತಾ, ದೇವಿಪ್ರಸಾದ್, ವಾದಿರಾಜ ಕಲ್ಲೂರಾಯ, ಅಸ್ಮಾ, ಯಶೋದಾ, ಅನಿತಾ, ಶಮೀಮಾ, ಸವಿತಾ ಉಪಸ್ಥಿತರಿದ್ದರು. ತಮಗಾಗಿ ವ್ಯವಸ್ಥೆಗೊಳಿಸಲಾದ ಜಾರು ಬಂಡಿ, ತಿರುಗು ಬಂಡಿ, ಜೋಕಾಲಿ ಹಾಗೂ ಇತರ ಉಪಕರಣಗಳಲ್ಲಿ ಕುಳಿತ ಪುಟಾಣಿಗಳು ಸಂತಸ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *