‌ಬಂಟ್ವಾಳ: ತರಕಾರಿ ಬೆಳೆಸಲು ಸ್ಥಳಾವಕಾಶಕ್ಕಿಂತ ಬೆಳೆಸಬೇಕೆಂಬ ಮನಸ್ಸು ಮುಖ್ಯ,ಮನಸ್ಸಿದಲ್ಲಿ ಎಲ್ಲಿಯೂ ತರಕಾರಿಯನ್ನು ಬೆಳೆಸಬಹುದು ಎಂದು ಟಾರೇಸ್ ಗಾರ್ಡನ್ ಖ್ಯಾತಿಯ ಮಂಗಳೂರಿನ ಬ್ಲಾನಿ ಡಿ ಸೋಜ ಹೇಳಿದ್ದರು.kaithota1

ಅವರು ಬಿ.ಸಿ.ರೋಡ್‍ನ ಬ್ರಾಹ್ಮಣ ಪರಿಷತ್ತ್ ಸಭಾಂಗಣದಲ್ಲಿ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಕೈ ತೋಟ ರಚನೆ ಮತ್ತು ನಿರ್ವಹಣೆ ತರಭೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮನೆಯ ಟಾರೇಸ್ ಮೇಲೆ ತರಕಾರಿ ಬೆಳೆಯುವ ವಿಧಾನ ಮತ್ತು ನಿರ್ವಹಣೆ ಕುರಿತು ತನ್ನ ಅನುಭವವನ್ನು ಹಂಚಿಕೊಂಡರು.

kaithota2
ಇನ್ನೋರ್ವ ಮುಖ್ಯ ಅತಿಥಿ ಬಿಲ್ಲಂಪದವು ಶ್ರೀ ನಾರಾಯಣ ಭಟ್ ಮನೆಯಂಗಳದಲ್ಲಿ ಕೈ-ತೋಟ ರಚನೆ ಹಾಗೂ ಬೀಜ ಸಂರಕ್ಷಣೆಯ ಕುರಿತು ಮಾಹಿತಿ ನೀಡುತ್ತಾ ನಶಿಸುತ್ತಿರುವ ಸ್ಥಳೀಯ ತರಕಾರಿ ಬೀಜಗಳನ್ನು ಸಂರಕ್ಷಿಸಲು ಬೀಜ ಬ್ಯಾಂಕ್ ರಚಿಸಬೇಕು ಎಂದರು.
ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ನೇತ್ರಾವತಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹರ್ಷೇಂದ್ರ ಹೆಗ್ಡೆ ಅಂತರಗುತ್ತು ಕೊೈಲ ಕಾರ್ಯದರ್ಶಿ ಶ್ರೀ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ಉಪಸ್ಥಿತರಿದ್ದರು. ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಪ್ರಾಸ್ತವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಯೋಜಕ ರುದೇಶ್ ಕಾರ್ಯಕ್ರಮ ನಿರೂಪಿಸಿ ಕ್ಷೇತ್ರ ಮೇಲ್ವಿಚಾರಕರಾದ ಶ್ರೀಮತಿ ವಿನೋದ ಸ್ವಾಗತಿಸಿ ಕ್ಷೇತ್ರ ಮೇಲ್ವಿಚಾರಕಾರದ ಶ್ರೀಮತಿ ಹರಿಣಾಕ್ಷಿ ವಂದಿಸಿದರು.

By suddi9

Leave a Reply

Your email address will not be published. Required fields are marked *