ಸಿದ್ದಕಟ್ಟೆ: ಪ್ರತಿಯೊಬ್ಬರು ತಾವು ಎಷ್ಟು ಆಹಾರ ಸೇವಿಸುತ್ತೇವೆ ಎಂಬುವುದು ಮುಖ್ಯವಲ್ಲ ಬದಲಿಗೆ ಎಷ್ಟು ಪೌಷ್ಟಿಕವಾದ ಆಹಾರ ಸೇವಿಸುತ್ತೇವೆ ಎಂಬುವುದೇ ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ ಸಮತೂಕದ ವ್ಯಕ್ತಿಗಳನ್ನು ಬೆಳೆಸಬಹುದು, ಆಹಾರ ಮತ್ತು ಪೌಷ್ಟಿಕ ಭದ್ರತೆಗೆ ಹೆಚ್ಚಿನ ಮಹತ್ವ ಕೊಡುವುದು ಅಗತ್ಯ ಎಂದು ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಹೇಳಿದರು, ಅವರು ಕರ್ಪೆ ಗ್ರಾಮದ ಕುಟ್ಟಿಕಳ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಆಹಾರ ಮತ್ತು ಪೌಪ್ಟಿಕ ಭದ್ರತೆ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

karpe
ದಿಶಾ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕಾದ  ಗುಣವತಿ ಮತ್ತು  ವಿನೋದ ತರಭೇತಿಯನ್ನು ನಡೆಸಿಕೊಟ್ಟರು.ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ದಿಶಾ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಗಾರವನ್ನು ಕುಟ್ಟಿಕಳ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ  ರುಡಾಲ್ಫ್ ದೇವಾನಂದ ರವರು ಉದ್ಘಾಟಿಸಿ ಶುಭ ಹಾರೈಸಿದರು.
ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಸಭಾಧ್ಯಕ್ಷತೆ ವಹಿಸಿದ್ದರು.ಕರ್ಪೆ ನಂದಿನಿ ಕೃಷಿಕರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಕಾರ್ಯದರ್ಶಿ  ಯಶೋಧ, ದಿಶಾ ಸಂಸ್ಥೆಯ ಕಾರ್ಯಕರ್ತರಾದ  ರಂಜಿನಿ ಮತ್ತು ಮೋಹಿನಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *