ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಚಿತ್ರನಟ ಅರ್ಜುನ್ ಶರ್ಜಾ 24ರಂದು ಗುರುವಾರ ಭೇಟಿ ನೀಡಿದರು. ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್ , ಪರಮೇಶ್ವರ ಭಟ್, ಆದರ್ಶ ಭಟ್  ಪ್ರಸಾದ ನೀಡಿದರು.

24vp arjunsharjaಅವರೊಂದಿಗೆ ತಾರಾನಾಥ ಶೆಟ್ಟಿ ಬೋಳಾರ್, ಬಿಲ್ಡರ್ ಇಂಜೀನೀಯರ್ ಸಂತೋಷ್‍ಶೆಟ್ಟಿ, ಕೆಂಪು ಕಲ್ಲಿನ ಶಿಲ್ಪಿ ಕುಬೇರ ,ಉದ್ಯಮಿ ರತೀಂದ್ರನಾಥ್ ಇದ್ದರು. ಹಳೆಯ ದೇವಸ್ಥಾನದ  ಮಾಡಿನ ತಾಮ್ರದಿಂದ ತಯಾರಿಸಲ್ಪಟ್ಟ ಸ್ಮರಣಿಕೆ ನೀಡಿ ಶಾಲು ಹಾಕಿ ಗೌರವಿಸಲಾಯಿತು.

24vp arjun 01

ಕರ್ನಾಟಕದಲ್ಲಿ ಇಂತಹ ಒಂದು ದೇವಸ್ಥಾನವನ್ನು ಕಂಡು ಬಹಳ ಸಂತೋಷ ವ್ಯಕ್ತಪಡಿಸಿದರು. ಕರ್ನಾಟಕದ ಕರಾವಳಿ ಭಾಗದ ಈ ದೇವಸ್ಥಾನಕ್ಕೆ ಬಂದಾಗ ಅದ್ಬುತವಾದ ಮರದಕೆತ್ತನೆಯ ಕೆಲಸಗಳನ್ನು ಕಂಡು ಇದು ಬೇಲೂರು ಹಳೆಬೀಡು ದೇವಸ್ಥಾನಗಳನ್ನು ಹೋಲಿಸುವಂತಿದೆ ಎಂದು ಅರ್ಜುನ್ ಶರ್ಜಾ ಬಹಳ ಕುಷಿಪಟ್ಟರು.

24vparjunsharja

24v arjun 0055

ನಾನು ಇಲ್ಲಿಯ ದೇವಸ್ಥಾನದ ಕೆತ್ತನೆ ಕೆಲಸಗಳನ್ನು ನೋಡಲು ಬಂದೆ. ನಾನು ಚೆನೈನ ಹೃದಯಭಾಗದ ಪೊರೂರುನಲ್ಲಿ ಒಂದು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದೇನೆ ದೇವಸ್ಥಾನವನ್ನು ಪ್ರಪಂಚದಲ್ಲೆ ಅತ್ಯುತ್ತಮ ದೇವಸ್ಥಾನವನ್ನಾಗಿ ನಿರ್ಮಿಸಬೇಕೆಂಬ ಉದ್ದೇಶವಿದೆ. ಏಕಶಿರ 180 ಟನ್ ತೂಕದ, 30ಅಡಿ ಎತ್ತರದ ಯೊಗಮುದ್ರೆಯಲ್ಲಿ ಕುಳಿತ ಭಂಗಿಯಲ್ಲಿರುವ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಪನೆ ನಡೆಯಲಿದೆ. ಈಗಾಗಲೆ ಶೆ. 90 ರಷ್ಟು ಕೆಲಸ ಮುಗಿದಿದೆ. ಕೆಂಪುಕಲ್ಲಿನ ಕೆತ್ತನೆಯನ್ನು ಮಾಡಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.

24 arjunsarja1

ಪ್ರಪಂಚದಲ್ಲೆ ಎಲ್ಲಿಯೂ ಇಲ್ಲದ ಅತ್ಯುತ್ತಮವಾದ ದೇವಸ್ಥಾನ ನಿರ್ಮಾಣಗೊಳ್ಳಲು ದೇವರ ಅನುಗ್ರಹದಿಂದ ಎಲ್ಲರ ಸಹಕಾರದಿಂದ ನಿರ್ಮಾಣಹಂತಕ್ಕೆ ಬಂದಿದೆ. ಪೊಳಲಿ ದೇವಸ್ಥಾನದ ಕಾಷ್ಠ ಶಿಲ್ಪದ ಶೇ 10 ಪರ್ಸಂಟ್ ನಮ್ಮ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇರಲಿದೆ ಪೆಬ್ರವರಿ ತಿಂಗಳಲ್ಲಿ ದೇವಸ್ಥಾನದ ಕುಂಭಾಬಿಷೇಕ ಮಾಡುವ ಅಲೋಚನೆ ಇದೆ ದೇಶದ ಪ್ರದಾನಮಂತ್ರಿ ಮೋದಿ ಅವರನ್ನು ಆಹ್ವಾನಿಸುವುದಾಗಿ ಸುದ್ದಿ9 ಜೊತೆ ಮಾತಾನಾಡಿದರು.ಈ ಸಂದರ್ಭದಲ್ಲಿ ಸುಬ್ರಾಯ ಕಾರಂತ, ರಾಜೇಶ್ ಕೊಟ್ಟಾರಿ,ಸೇಸಪ್ಪ ಸ್ವಾಮಿ,ನವೀನ್ , ಮನೋಜು , ಸಂದೀಪ್, ಗಣೇಶ್ ಭಟ್  ಹಾಗೂ ದೇವಳದ ಅರ್ಚಕರು, ಸಿಬ್ಬಂದಿಗಳು ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *