ಬಡಗಬೆಳ್ಳೂರು: ದೀನ ಬಂಧು ಸಮಾಜ ಸೇವಾ ಸಂಸ್ಥೆಯ ಸದಸ್ಯರು ಮೃತ್ಯುಂಜಯ ಹೋಮದ ಸಂದರ್ಭದಲ್ಲಿ ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ಗಂಟೆ ಢಮರು ವಾದನ ವನ್ನು ಕ್ಷೇತ್ರದ ಸಂದೀಪ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಳದ ಅರ್ಚಕ ರಮೇಶ್ ದೀನಬಂಧು ಗ್ರೂಪ್ ಸದಸ್ಯರಾದ ಎಚ್ ಎಸ್ ಜನಾರ್ಧನ , ವಸಂತ ಬೆಳ್ಳೂರು, ದಿನೇಶ್ ವರಕೋಡಿ, ರಾಜೇಶ್, ದಿನೇಶ್ ದೇವರಗುಡ್ಡೆ, ಪ್ರವೀಣ್ ಸೂರ್ಲ, ರವಿ, ಲೋಕಯ್ಯ, ದಿನೇಶ್ ಬಟ್ಟಾಜೆ,ಬಾಸ್ಕರ ಮತ್ತಿತರರು ಇದ್ದರು.
