ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೀನ ಬಂಧು ವಾಟ್ಸಪ್ ಗ್ರೂಪ್ ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸೆ.6ರಂದು ಭಾನುವಾರ ಎಡಪದವು ವಿಷ್ಣು ಮೂರ್ತಿ ತಂತ್ರಿ ಮತ್ತು ಇತರ ಋತ್ವಿಜರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಸಂಜೀವಿನಿ ಮಹಾ ಮೃತ್ಯುಂಜಯ ರುದ್ರ ಹೋಮ ನಡೆಯಿತು.6vpmrthyunjayahoma

ಪ್ರವೀಣ್ ಪ್ರಮೀಳಾ ದಂಪತಿಗಳು ಪೂಜಾ ಸಂಕಲ್ಪವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಕೊಳತ್ತಮಜಲು ವಿಷವೈದ್ಯರಾದ ಶೀನ ಪೂಜಾರಿ ಬಿಲ್ಲವ ಮುಖಂಡರಾದ ಸೇಸಪ್ಪ ಕೊಟ್ಯಾನ್ ಪಚ್ಚಿನಡ್ಕ , ಕ್ಷೇತ್ರಾಧಿಕಾರಿ ಸಂದೀಪ್ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ  ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ್, ಮುಖಂಡರಾದ ದೇವಪ್ಪ ಪೂಜಾರಿ ಉದ್ಯಮಿ ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ಹಾಗೂ ದೀನಬಂಧು ಗ್ರೂಪ್ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *