ಕಿನ್ನಿಗೋಳಿ; ಜನನಿ ಮೆಲೋಡಿಯಸ್ ಕಿನ್ನಿಗೋಳಿ ಇದರ ವತಿಯಿಂದ ನಡೆಯುವ ಕರೋಕೆ ಗಾಯನ ಸ್ಪರ್ಧೆಯ ಉದ್ಘಟನೆಯು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು,

ಕಿನ್ನಿಗೋಳಿ ಪಂಚಾಯತ್ ಮಾಜೀ ಅಧ್ಯಕ್ಷ ದೇವ ಪ್ರಸದ್ ಪುನರೂರು ಕಾರ್ಯಕ್ರಮದ ಉದ್ಘಟನೆಯನ್ನು ನೇರವೇರಿಸಿದರು ನಂತರ ಮಾತ ನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಜನನಿ ಸಂಸ್ಥೆ, ಗ್ರಾಮಾಂತರ ಪ್ರದೇಶದ ಪ್ರತಿಭೆಗಳಿಗೆ ಉತ್ತಮ ಅವಕಾಶವನ್ನು ಒದಗಿಸಿಸುತ್ತಿದೆ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು, ಈ ಸಂದರ್ಭದಲ್ಲಿ ಯುಗಪುರುಷದ ಭುವನಾಭಿರಾಮ ಉಡುಪ. ಸಜ್ಜನ ಬಾಂದವರು ಸಂಸ್ಥೆಯ ಅಧ್ಯಕ್ಷ ರಘನಾಥ್ ಕೆಂಚನ ಕೆರೆ, ರೋಟರಿ ಅದ್ಯಕ್ಷ ವಿಲಿಯಂ ಸಿಕ್ವೇರ, ಸಂತೋಷ ಶೆಟ್ಟಿ, ಮಹಮದ್ ಅರೀಪ್, ರಾಜೇಶ್ ಕೆಂಚನ ಕೆರೆ, ಜನನಿ ಮೆಲೋಡಿಯಸ್ನ ಪ್ರಕಾಶ್ ಆಚಾರ್ಯ, ಸ್ವಾಮ್ಯ ಭಟ್ ಮುಂತಾದವರು ಉಪಸ್ಥಿತರಿದ್ದರು ಸುಧಾಕರ್ ಶೆಟ್ಟಿ ಸಂಕಲ ಕರಿಯ ಕಾರ್ಯಕ್ರಮ ನೀರೂಪಿಸಿದರು.
