ಬಂಟ್ವಾಳ: ಬಂಟ್ವಾಳತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ನ ಅಮೃತೋತ್ಸವ ಪ್ರಯುಕ್ತ ಭಾರತೀಯ ಕಥೋಲಿಕ್ ಯುವ ಸಂಚಾಲನಾ ಘಟಕ ವತಿಯಿಂದ ಕುರಿಯಾಳದಲ್ಲಿ ಭಾನುವಾರ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮವನ್ನು ಧರ್ಮ ಗುರು ಎಲಿಯಾಸ್ ಡಿ’ಸೋಜ ಮತ್ತು ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಉದ್ಘಾಟಿಸಿದರು.

ಧರ್ಮಗುರು ಸಂತೋಷ್ ಲೋಬೊ ಮಾತನಾಡಿ, ಕೆಸರಿನ ಕ್ರೀಡಾಕೂಟ ಆರೋಗ್ಯ ವೃದ್ಧಿಸುತ್ತದೆ ಎಂದರು.
ಸ್ಥಳೀಯ ತಾ.ಪಂ.ಸದಸ್ಯ ಎಪ್ರಿಯಂ ಸಿಕ್ವೇರಾ, ಪಾಲನಾ ಮಂಡಳಿ ಉಪಾಧ್ಯಕ್ಷ ರಿಚ್ಚಾರ್ಡ್ ಮಿನೇಜಸ್, ಕಾರ್ಯದರ್ಶಿ ಐರಿನ್ ಡಿ’ಸೋಜ, ಅಮೃತೋತ್ಸವ ಸಮಿತಿ ಸಂಚಾಲಕ ವಾಲ್ಟರ್ ನೊರೊನ್ಹ, ಕಾರ್ಯದರ್ಶಿ ಸಿಪ್ರಿಯನ್ ಡಿ’ಸೋಜ, ಯೋಜನಾ ಸಮಿತಿ ಸಂಯೋಜಕ ಜ್ಯೊಕುವೆಲ್ಲೊ, ಐಸಿವೈಎಂ ಸಂಘಟನೆ ಸಚೇತಕ ಆಲ್ವಿನ್ ಪಿಂಟೊ, ಐಸಿವೈಎಂ ಬಂಟ್ವಾಳ ವಲಯಾಧ್ಯಕ್ಷ ಮವರ್ಿನ್ ಡಿಸಿಲ್ವ ಮತ್ತಿತರರು ಇದ್ದರು.
ಐಸಿವೈಎಂ ಲೊರೆಟ್ಟೊ ಘಟಕ ಆಧ್ಯಕ್ಷ ಗ್ಲೆಡ್ವಿನ್ ಸ್ವಾಗತಿಸಿ, ಕಾರ್ಯದರ್ಶಿ ದೀಪಾ ಡಿ’ಕೋಸ್ತಾ ವಂದಿಸಿದರು. ರೈನಾ ಫೊನ್ಸೆಕಾ ಕಾರ್ಯಕ್ರಮ ನಿರೂಪಿಸಿದರು.
