ಪರಿಸರದ ಪ್ರಖ್ಯಾತ ನ್ಯಾಯವಾದಿಗಳು, ನೋಟರಿ ಪಬ್ಲಿಕ್ ಹಾಗೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಯಾಗಿರುವ ಶ್ರೀ ಎಂ.ಚಂದ್ರಶೇಖರ್ ಪೂಜಾರಿಯವರ ಕಛೇರಿ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿರುವ “ಅಚ್ಚುತ ಕಾಂಪ್ಲೆಕ್ಸ್” ಕಟ್ಟಡಕ್ಕೆ ದಿನಾಂಕ 06.10.2019 ರಂದು ಸ್ಥಳಾಂತರಗೊಳ್ಳಲಿದೆ.
ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ “ಮುಗ್ಗಗುತ್ತು” ಮನೆತನದಲ್ಲಿ ಪಂಜಾಜೆ ಕೊರಗಪ್ಪ ಪೂಜಾರಿ ಮತ್ತು ಶ್ರೀಮತಿ ಮುತ್ತಮ್ಮ ದಂಪತಿಗಳ ಸುಪುತ್ರರಾಗಿ ಜನ್ಮತಾಳಿದ ಶ್ರೀಯುತರು ಪಾಣೆಮಂಗಳೂರು, ವಿಟ್ಲ ಹಾಗೂ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪದವಿ ವ್ಯಾಸಂಗವನ್ನು ಪೂರೈಸಿ ಬಳಿಕ ಎಲ್.ಎಲ್.ಬಿ. ಶಿಕ್ಷಣ ಪಡೆದು 1984 ರಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಇಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಬಳಿಕದ ದಿನಗಳಲ್ಲಿ ವಕೀಲರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದವರು. ಮಂಗಳೂರಿನ ಖ್ಯಾತ ನ್ಯಾಯವಾದಿಗಳು ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ ಬಿ. ಜನಾರ್ಧನ ಪೂಜಾರಿ ಮಾರ್ಗದರ್ಶನಲ್ಲಿ ಶ್ರೀ ಯಂ. ಜಗನ್ನಾಥ ಪೂಜಾರಿ ಹಾಗೂ ಶ್ರೀ ವಸಂತ ಕಾರಂದೂರು ಇವರ ಸಹಭಾಗಿತ್ವದಲ್ಲಿ ವೃತ್ತಿ ಬದುಕಿನಲ್ಲಿ ಕಾರ್ಯಪ್ರವೃತ್ತರಾದರು, ಯಶಸ್ಸನ್ನು ಕಂಡರು. 1989 ರಲ್ಲಿ ಬಿ.ಸಿ.ರೋಡಿನಲ್ಲಿ ಸ್ವಂತ ಕಛೇರಿ ಪ್ರಾರಂಭಿಸಿದರು. 1999 ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ನೋಟರಿ ಪಬ್ಲಿಕ್ ಆಗಿ ನೇಮಕಗೊಂಡರು.
ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ಉಚಿತ ಕಾನೂನು ಸೇವಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸೇವಾ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಸಾಮಾಜಿಕ ಕಳಕಳಿಯ ಸೇವೆ ಶ್ಲಾಘನಾರ್ಹ. ಬಂಟ್ವಾಳ ರೋಟರಿ ಕ್ಲಬ್ ಸದಸ್ಯರಾಗಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿಯೂ, ಮನೆತನದ ಮುಗ್ಗ ಗುತ್ತು ಟ್ರಸ್ಟ್ ಇದರ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಇವರ ಸಹಧರ್ಮಿಣಿ ಶ್ರೀಮತಿ ಎರ್ಮಾಳ್ ಕಲ್ಪನಾ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಸ್ಪೂರ್ತಿ ರಿತೇಶ್, ಅಳಿಯ ರಿತೇಶ್ ತಲಪಾಡಿ, ದುಬೈಯಲ್ಲಿ ಉದ್ಯೋಗ ನಿರತರಾಗಿದ್ದಾರೆ. ಇನ್ನೋರ್ವ ಸುಪುತ್ರಿ ಸ್ವೀಕೃತಿ ಚಂದ್ರಶೇಖರ್ ಬೆಂಗಳೂರಿನ ಉಚ್ಛನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಶ್ರೀ ಸಂದೀಪ್ ಪಾಟೀಲ್ ಇವರ ಮಾರ್ಗದರ್ಶನದಲ್ಲಿ ತಮ್ಮ ವಕೀಲಿ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದಾರೆ.
ಒಟ್ಟಿನಲ್ಲಿ ಸುಮಾರು 35 ವರ್ಷಗಳಿಗಿಂತ ಅಧಿಕ ವಕೀಲ ವೃತ್ತಿಯ ಔದ್ಯೋಗಿಕ ಬದುಕಿನ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಶ್ರೀ ಎಂ. ಚಂದ್ರಶೇಖರ ಪೂಜಾರಿಯವರು ದಿನಾಂಕ 06.10.2019 ರಂದು ತಮ್ಮ ನೂತನ ಕಛೇರಿಗೆ ಸ್ಥಳಾಂತರಗೊಳ್ಳಲಿದ್ದು ಕ್ಷೇತ್ರದ ಶಾಸಕರು, ಮಾಜಿ ಸಚಿವರು, ವಿವಿಧ ಜನ ಪ್ರತಿನಿಧಿಗಳು ಹಾಗೂ ಹಿತೈಷಿಗಳು ಈ ಸಮಾರಂಭದಲ್ಲಿ ಭಾಗಿಗಳಾಗಲಿದ್ದಾರೆ. ತಮಗೆಲ್ಲರಿಗೂ ತಮ್ಮ ಕಛೇರಿಗೆ ಈ ಪತ್ರಿಕಾ ಪ್ರಕಟನೆಯೊಂದಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *