ಬಂಟ್ವಾಳ :  ನಗರ ಠಾಣೆಯನ್ನು ವೃತ್ತ ನಿರೀಕ್ಷಕರ ದರ್ಜೆಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿರವರು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಗುರುವಾರ ಭೇಟಿ  ಮಾಡಿ ಮನವಿ ಸಲ್ಲಿಸಿ ಚರ್ಚಿಸಿದರು. ಇದಕ್ಕೆ ಗೃಹಸಚಿವರು ಸಕರಾತ್ಮಕವಾಗಿ ಸ್ಪಂದಿಸಿದರು.
IMG-20191003-WA0125
ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಅವರು ಆರೋಗ್ಯ ಸಚಿವ ಶ್ರೀ ರಾಮುಲು ರವರನ್ನು ಬೇಟಿ ಮಾಡಿ ಪುಂಜಾಲಕಟ್ಟೆ ಪ್ರಾಥಮಿಕ ಹಾಗೂ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವಂತೆ ಮನವಿ ಮಾಡಿದರು. ವಿಧಾನಸಭಾ ಅಧಿವೇಶನದ ಬಳಿಕ ಬಂಟ್ವಾಳಕ್ಕೆ ಭೇಟಿ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರಲ್ಲದೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ ಮಾಡುವ ಬಗ್ಗೆಯು ಆಶ್ವಾಸನೆ ನೀಡಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್  ತಿಳಿಸಿದ್ದಾರೆ.
IMG-20191003-WA0126
ಉನ್ನತ ಶಿಕ್ಷಣ ಸಚಿವ,ಡಿಸಿಎಂ ಡಾ.ಅಶ್ವತ್ಥ ನಾರಾಯಣ ರವರನ್ನು ಭೇಟಿಯಾದ ಶಾಸಕರು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಸಮಸ್ಯೆ, ಆಡಳಿತ ಮಂಡಳಿ ಸದಸ್ಯರು ಹಾಗೂ ವಿಧ್ಯಾರ್ಥಿಗಳು ನೀಡಿರುವ ಲಿಖಿತ ದೂರಿನ ಬಗ್ಗೆ   ಸಚಿವರ ಗಮನ ಸೆಳೆದರು. ಈ ಬಗ್ಗೆ ತಕ್ಷಣ ಗಮನಹರಿಸುವಂತೆ ಸಂಬಂಧಿಸಿದ ಉಪ ಕುಲಪತಿಯವರಿಗೆ ತಕ್ಷಣ ಸಚಿವರು ಸೂಚಿಸಿದರು.   ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಉಮೇಶ್ ಅರಳ,ಪ್ರಜ್ವಲ್, ಪವನ್ ಕುಮಾರ್ ಮೊದಲಾದವರಿದ್ದರು.
2 Attachments

By suddi9

Leave a Reply

Your email address will not be published. Required fields are marked *