ಬಂಟ್ವಾಳ: ಇಲ್ಲಿನ ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜಿನಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಇವರು ‘ಮದ್ಯಪಾನ ಮುಕ್ತ ವ್ಯಸನ ಮುಕ್ತ ಸ್ವಚ್ಛಭಾರತ ಇತ್ಯಾದಿ ಕನಸುಗಳನ್ನು ಕಂಡ ಗಾಂಧೀಜಿಯ ವಿಚಾರಗಳು ಸಾರ್ವಕಾಲಿಕ ಮತ್ತು ನಿತ್ಯ ಪ್ರಾಸಂಗಿಕ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗುಡಿಕೈಗಾರಿಕೆಗಳ ಮಹತ್ವವನ್ನು ಸಾರಿದ ಮತ್ತು ಸರ್ವಸಮಾನತೆಯನ್ನು ಆಧಾರವನ್ನಾಗಿಸಿಕೊಂಡ ಗಾಂಧಿಯವರು ರಾಮರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುವುದರಲ್ಲಿ ವಿದ್ಯಾರ್ಥಿ ಸಮುದಾಯ ಸಹಕರಿಸಬೇಕೆಂದು ಕರೆಯಿತ್ತರು.

DSC_0175

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಿದ ಭಾಷಣ ಸ್ಪರ್ಧೆ ಮತ್ತು ಭಿತ್ತಿ ಪತ್ರ ರಚನೆ ಮತ್ತು ವಿವರಣೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರಾಂಶುಪಾಲರು ವಿತರಿಸಿದರು. ‘ರಕ್ತದಾನ ಜೀವದಾ£’À ಎಂಬ ವಿಷಯದಲ್ಲಿ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ಸ್ವಯಂಸೇವಕರಾದ ಕಾರ್ತಿಕ್ ಪ್ರಥಮ ಬಹುಮಾನವನ್ನು ಗಳಿಸಿದರೆ ಶ್ವೇತಾ ಮತ್ತು ಹರಿಕಿರಣ್ ಕ್ರಮವಾಗಿ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ ಸ್ವಚ್ಛತಾ ಅಭಿಯಾನದಲ್ಲಿ ‘ಯುವಜನಾಂಗದ ಪಾತ’ ಎಂಬ ವಿಷಯದಲ್ಲಿ ಏರ್ಪಟ್ಟ ‘ಭಿತ್ತಿ ಪತ್ರ ರಚನೆ ಮತ್ತು ವಿವರ ಸ್ಪರ್ಧೆಯಲ್ಲಿ ಕಾರ್ತಿಕ್ ಮತ್ತು ಸುರಕ್ಷಾ ಇವರು ಪ್ರಥಮ ಬಹುಮಾನವನ್ನು ಗಳಿಸಿದರೆ ಸಂದೀಪ್ ಮತ್ತು ಪುಷ್ಪರಾಜ್ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಘಟಕ ನಾಯಕಿ ಗೌತಮಿ ಬಹುಮಾನ ವಿವರಣಾ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮ ಸಂಯೋಜಕರಾದ ಡಾ| ಮಂಜುನಾಥ ಉಡುಪ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರೆ ಎನ್.ಸಿ.ಸಿ ಅಧಿಕಾರಿಗಳಾದ ಕ್ಯಾಪ್ಟನ್ ಸುಂದರ್ ಇವರು ವಂದಿಸಿದರು.
ಇನ್ನೋರ್ವ ಯೋಜನಾಧಿಕಾರಿಗಳಾದ ಶ್ರೀಮತಿ ಶಶಿಕಲಾ ಎಮ್.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂ ಸೇವಕಿ ಸುಶ್ಮಿತಾ ಪೈ ಕಾರ್ಯಕ್ರಮ ನಿರೂಪಿಸಿದರೆ ಕುಮಾರಿ ಶಿಲ್ಪಾ ಪ್ರಾರ್ಥಿಸಿದರು. ಈ ಸಂದರ್ಭ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕಾಲೇಜು ವಠಾರವನ್ನು ಮತ್ತು ಕಾಲೇಜಿನಿಂದ ಹಾಸ್ಟೆಲ್‍ವರೆಗೆ ಹಾದುಹೋಗುವ ಸಾರ್ವಜನಿಕ ರಸ್ತೆಯ ಎರಡೂ ಭಾಗದ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

By suddi9

Leave a Reply

Your email address will not be published. Required fields are marked *