ಬಂಟ್ವಾಳ: ಟೂರಿಸ್ಟ್ ವಾಹನ ಚಾಲಕರಿಗೂ ಸ್ವಾಭಿಮಾನ ಇದೆ. ಚಾಲಕರನ್ನು ಕೀಳಾಗಿ ಕಾಣದಿರಿ. ಅವರನ್ನು ಗೌರವದಿಂದ ಕಾಣಿ ಎಂದು ತಾಕೀತು ಮಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ವಿಟ್ಲ ಹೇಳಿದ್ದಾರೆ.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಟೂರಿಸ್ಟ್ ವಾಹನ ಚಾಲಕ, ಮಾಲಕರ ಸಂಘ ಭಾನುವಾರ ನಡೆದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರ ಪರವಾಗಿ ಯಾವುದೇ ಸರಕಾರ ಮಾತಾಡಲ್ಲ. ಹಾಗಾಗಿ ಪೊಲೀಸರು ಚಾಲಕರ ಮೇಲೆ ಸವಾರಿ ನಡೆಯುತ್ತಿದ್ದಾರೆ. ಈ ಶೋಷಣೆಯ ವಿರುದ್ಧ ಹೋರಾಡಲು ಸಮೂಹ ಒಗ್ಗಟ್ಟಾಗಬೇಕು ಎಂದರು. ವಾಹನ ಚಾಲಕರ ಮತ್ತು ಮಾಲಕರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಂಘಿಕ ಪ್ರಯತ್ನ ಅಗತ್ಯ ಎಂದು ಟೂರಿಸ್ಟ್ ವಾಹನ ಚಾಲಕರ, ಮಾಲಕರ ಸಂಘದ ಪ್ರಧಾನ ಅಧ್ಯಕ್ಷ ಪ್ರಭಾಕರ್ ದೈವಗುಡ್ಡೆ ತಿಳಿಸಿದರು.
ಬದುಕಿಗೆ ಆಶ್ರಯ, ಶೋಷಣೆ, ದಬ್ಬಾಳಿಕೆ, ಕಿರುಕುಳದ ವಿರುದ್ಧ ಕಾನೂನು ಹೋರಾಡಲು ಜಾತಿ, ಧರ್ಮ, ರಾಜಕೀಯ ಪಕ್ಷದ ಧೋರಣೆಯನ್ನು ತೊರೆದು ಸಂಘವನ್ನು ಪ್ರೀತಿಸಬೇಕು. ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಟೂರಿಸ್ಟ್ ವಾಹನ ಚಾಲಕರ, ಮಾಲಕರ ಜಿಲ್ಲಾ ಸಂಘದ ಸಂಚಾಲಕ ಕೃಷ್ಣ ಅಲ್ಲಿಪಾದೆ ಎಂದು ತಿಳಿಸಿದರು.
ಗ್ಯಾರೇಜ್ ಸಂಘದ ಉಪಾಧ್ಯಕ್ಷ ರಾಜ ಚೆಂಡ್ತಿಮಾರ್,
ಕಾರ್ಮಿಕ ಮುಖಂಡ ಉದಯ ಕುಮಾರ್, ಚಾಲಕ ಸಂಘದ ಮುಖಂಡರಾದ ಸುರೇಶ್ ಬಸ್ತಿಕೋಡಿ, ನಿರಂಜನ ಸ್ವಾಮಿ, ನ್ಯಾಯವಾದಿ ತುಳಸಿದಾಸ್ ಉಪಸ್ಥಿತರಿದ್ದರು

