ಬಂಟ್ವಾಳ : ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದಲ್ಲಿ  ಮುಂದಿನ ಜನವರಿ 16 ರಂದು ನಡೆಯುವ ಶ್ರೀ ನಾಗಮಂಡಲೋತ್ಸವವನ್ನು ಪ್ಲಾಸ್ಟಿಕ್ , ರಾಸಾಯನಿಕ ಮುಕ್ತ ವಾಗಿ ನಡೆಸಲು   ಸಮಿತಿಯು ಆಶಯ ವ್ಯಕ್ತಪಡಿಸಿದೆ.                                              ಈ ನಿಟ್ಟಿನಲ್ಲಿ ಭಾನುವಾರ ಪುದು , ಕೊಡ್ಮಣ್ , ಕಳ್ಳಿಗೆ , ತುಂಬೆ , ಮೇರಮಜಲು , ಅರ್ಕುಳ  ಹೀಗೆ ಆರು  ಗ್ರಾಮಗಳ ರೈತರು  ತರಕಾರಿ ಬೀಜ ಗಳನ್ನ ತಮ್ಮ ಹಿತ್ತಲಲ್ಲಿ ಹಾಕಿ ಬೆಳೆಸುವ ಮೂಲಕ  ವಸುಂದರಾ ನಮನ ಕಾರ್ಯಕ್ರಮ ಆಯೋಜಿಸಲಾಯಿತು .
IMG_0038   ಈ ಆರು ಗ್ರಾಮಗಳಲ್ಲಿ ಇನ್ನು ಉಳಿದ ೩ ತಿಂಗಳಲ್ಲಿ ತಾವು ಬೆಳೆಸಿದ ತರಕಾರಿಯನ್ನು  ನಾಗಮಂಡಲ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆಯಾಗಿ ಸಲ್ಲಿಸುವ ಸಂಕಲ್ಪವನ್ನು ಗ್ರಾಮಸ್ಥರು ಕೈಗೊಂಡರು.               ಅಷ್ಟ  ಪವಿತ್ರ ನಾಗ ಮಂಡಲೋತ್ಸವವು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಡೆಯಬೇಕೆಂಬ ಆಶಯದಂತೆ ಪ್ರಕೃತಿ ಪೂಜೆ , ಕೃಷಿ ಕಾರ್ಯಕ್ಕೆ ಒತ್ತು  ಕೊಡುವ ನಿಟ್ಟಿನಲ್ಲಿ ನಾಲ್ಕೈದು ದಿನಗಳ ವರೆಗೆ ಕೆಡದೆ ಉಳಿಸಬಹುದಾದಂತಹ , ಕುಂಬಳ ಕಾಯಿ , ಚೀನಿಕಾಯಿ , ಸೌತೆಕಾಯಿ , ಹೀರೆಕಾಯಿ , ಮುಂತಾದ ತರಕಾರಿ ಬೀಜಗಳನ್ನು ಈ ಸಂದರ್ಭ ಗ್ರಾಮಸ್ಥರಿಗೆ ವಿತರಿಸಲಾಯಿತು . ನಾವೇ ಬೆಳೆಸುವ ತರಕಾರಿ ಗಳು ರಾಸಾಯನಿಕ ಮುಕ್ತ ವಾಗಿದ್ದು  ಆರೋಗ್ಯಕ್ಕೆ ಪೂರಕ ವಾಗಿರುತ್ತದೆ .

IMG_9979

ಇದು ಪ್ರಕೃತಿ ಮತ್ತು ಮನುಷ್ಯರ ಮದ್ಯೆ ಉತ್ತಮ ಸಂಬಂಧ ವೃದ್ಧಿ ಯಾಗುತ್ತದೆ ಹಾಗು ಅಷ್ಟಪವಿತ್ರ ನಾಗ ಮಂಡಲೋತ್ಸವವು ಪ್ಲಾಸ್ಟಿಕ್, ರಾಸಾಯನಿಕ ಮುಕ್ತವಾಗಿ ಸಂಪನ್ನಗೊಳ್ಳುವುದು ಎಂಬ ಅಭಿಪ್ರಾಯಕ್ಕೆ ಬರಲಾಯಿತು. ನಡೆದ ವಸುಂದರಾ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್ ಮಾತನಾಡಿ,    ಕೃಷಿ ಸಂಸ್ಕೃತಿ ಯೇ ಮಾತೃ  ಸಂಸ್ಕೃತಿ , ಹಿರಿಯರ ಕಾಲದಿಂದಲೂ  ಕಾಪಾಡಿಕೊಂಡು ಬಂದಿರುವ ಕೃಷಿ ಭೂಮಿಯ ಸಾರ , ಕೃಷಿ ಬದುಕು ಗಳನ್ನೂ ಉಳಿಸಿಕೊಂಡು ಬರಲಾಗಿದ್ದು, . ಕೃಷಿ ಭೂಮಿ ಗೆ ವಿಷಯುಕ್ತ ರಾಸಾಯನಿಕ ಗೊಬ್ಬರಗಳಿಂದ ಉತ್ಪನ್ನ ಪಡೆಯುವ ಧಾವಂತ ದಿಂದ ಮಣ್ಣಿನ ಸಾರ , ಕೃಷಿ ಬದುಕನ್ನು ಕಳೆದುಕೊಳ್ಳುವಂತಾಗಿದೆ. ಮಣ್ಣಿಗೆ ಅನುಗುಣವಾದ ಕೃಷಿ ಕಾರ್ಯ ದಲ್ಲಿ ಬದ್ಧತೆ ಯಿಂದ ತೊಡಗಿಸಿಕೊಂಡಲ್ಲಿ  ಕೃಷಿ ಸಂಸ್ಕೃತಿ ಉಳಿಸಿ ಕೊಳ್ಳಲು ಸಾಧ್ಯ ಎಂದರು.
ಕಾಂಬೋಡಿ ಗುತ್ತು ರತ್ನಾಕರ ಶೆಟ್ಟಿ , ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಮಾಜಿಲ ಗುತ್ತು ರಾಮದಾಸ್ ಕೋಟ್ಯಾನ್ , ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ .  ಅಷ್ಟ ಪವಿತ್ರ ನಾಗ ಮಂಡಲೋತ್ಸವ  ಸಮಿತಿ ಗೌರವಾಧ್ಯಕ್ಷರಾದ ಸುಜೀರ್ ಗುತ್ತು ಐತಪ್ಪಆಳ್ವ  ,ಅಧ್ಯಕ್ಷ ಪ್ರಕಾಶ್ಚಂದ್ರರೈ  ದೇವಸ್ಯ ,ಕ್ಷೇತ್ರ ದ ಅಧ್ಯಕ್ಷ ಪೂವಪ್ಪ ಬಂಗೇರ ನಾಣ್ಯ , ಉಪಸ್ಥಿತರಿದ್ದರು ಕೃಷಿಕರಾದ ಕೋಟಿ  ಪೂಜಾರಿ  ಸುಜೀರು , ಹರಿಶ್ಚಂದ್ರ ಆಳ್ವ  ಪದೆಂಜಾರು, ವರದರಾಜ್ ನಾಣ್ಯ , ನಾರಾಯಣ ಬಂಗೇರ ಗಂಪದಕೋಡಿ , ಜಯರಾಮ್ ಶೆಟ್ಟಿ ಅಬ್ಬೆಟ್ಟು , ಶಂಕರ ಪೂಜಾರಿ , ಅರುಣ್ ಶೆಟ್ಟಿ ಪೆರ್ಲ ಬೈಲ್, ನಾರಾಯಣ ಮಾರ್ಲ , ಸಂತೋಷ್ ನೆತ್ತರ ಕೆರೆ , ಗಿರೀಶ್ ಶೆಟ್ಟಿ ಕುಂಪನಮಜಲು , ದೇವದಾಸ್ ಶೆಟ್ಟಿ  ಕೊಡ್ಮಣ್ ಸಹಿತ  ಗ್ರಾಮಸ್ಥರು  ತರಕಾರಿ ಬೀಜಗಳನ್ನು ಪಡೆದು ತರಕಾರಿ ಬೆಳೆಯುವ ಆಶಯ ವ್ಯಕ್ತ ಪಡಿಸಿದರು
  ಅಷ್ಟ  ಪವಿತ್ರ ನಾಗ ಮಂಡಲೋತ್ಸವ ಸಮಿತಿ ಯ ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾಪಿಸಿದರು , ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ ವಂದಿಸಿದರು , ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು
IMG_9979
2

 

By suddi9

Leave a Reply

Your email address will not be published. Required fields are marked *