ಕುಂದಾಪುರ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಅಕ್ಟೋಬರ್ 2 ರಂದು ದಾನಿಗಳಿಂದ ಸಮರ್ಪಣೆಯಾಗಲಿರುವ ಬ್ರಹ್ಮರಥವನ್ನು ಸೆ 29ರಂದು ಕೋಟೇಶ್ವರದ ಶಿಲ್ಪಿಯ ಕಾರ್ಯಗಾರದಿಂದ ಪೂಜೆ ನೆರವೇರಿಸಿದ ಬಳಿಕ ದಾನಿಗಲಾದ ಎಂ .ಮತ್ತಪ್ಪ ರೈ ಮತ್ತು ಅಜಿತ್ ರೈ ಅವರಿಗೆ ಬ್ರಹ್ಮರಥವನ್ನು ಹಸ್ತಾಂತರ ಮಾಡಲಿದ್ದಾರೆ.ಸೆ.30ರಂದು ಬೆಳಗ್ಗೆ 9 ಗಂಟೆಗೆ ಕೋಟೇಶ್ವರ ದಿಂದ ಹೊರಟು. ಉಡುಪಿ ,ಕಾಪು,ಹೊಸಮಾರಿಗುಡಿ ದೇವಸ್ಥಾನಕ್ಕೆ ತಲುಪಲಿದೆ.ಮದ್ಯಾಹ್ನ ದೇವಸ್ಥಾನದಲ್ಲಿ ಪೂಜೆ ನಡೆದ ಬಳಿಕ ಅನ್ನಪ್ರಸಾದ ಸ್ವೀಕರಿಸಿ ಅಲ್ಲಿಂದ ನೇರವಾಗಿ ಬಂದು ಬಪ್ಪನಾಡು ಶ್ರೀ ದುಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಸ್ವಾಗತಿಸಲಿದ್ದಾರೆ.

ಅಲ್ಲಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಂದು ತಂಗಳಿದೆ. ಅ. 1ರಂದು ಬೆಳಗ್ಗೆ 8.ಗಂಟೆಗೆ ಹೊರಟು ಹೊರಡುವ ಬ್ರಹ್ಮರಥವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಾ ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡು ತಲುಪಲಿದೆ. ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಬಳಿ ತುಳುಕೂಟ, ತಾಲೂಕಿನ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ನೀಡಲಾಗುವುದು. ರಥಕ್ಕೆ ಪುಷ್ಪಾರ್ಚಣೆಯೊಂದಿಗೆ ಸ್ವಾಗತಿಸಿ ಅಲ್ಲಿಂದ ಚೆಂಡೆವಾದನ ಮತ್ತಿತರ ಸಾಂಸ್ಕ್ರತಿಕ ಪ್ರದರ್ಶನಗಳೊಂದಿಗೆ ರಾಜರಸ್ತೆಯಲ್ಲಿ ಸಾಗಿ ಬಿ.ಸಿ.ರೋಡು ವೃತ್ತ ಬಳಿ ಬ್ರಹ್ಮರಥವನ್ನು ಶ್ರೀ ಕ್ಷೇತ್ರಕ್ಕೆ ಬೀಳ್ಕೊಡಲಾಗುವುದು.

ನಂತೆರ ಉಪ್ಪಿನಂಗಡಿ ಶ್ರೀ ಸಹಶ್ರಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಸ್ವಾಗತದೊಂದಿಗೆ ಬ್ರಹ್ಮ ರಥವನ್ನು ಸ್ವಾಗತಿಸಲಾಗುವುದು ಎಂದು ಉಪ್ಪಿನಂಗಡಿ ಶ್ರೀ ಸಹಶ್ರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಸುದ್ದಿ9 ಗೆ ತಿಳಿಸಿದ್ದಾರೆ.ಈ ಸಂಧರಭದಲ್ಲಿ ಸುಳ್ಯ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ.ಗ್ರಾ.ಪಂ ಸದಸ್ಯ ಹರೀಶ್ ಇಂಜಾರುಹೋಟೇಲ್ ಉಧ್ಯಮಿ ಸತೀಶ್ , ಬಜಪೆ ಠಾಣಾ ಎ.ಎಸ್. ಐ.ರಾಮಚಂದ್ರ ಇದ್ದರು.
|
ReplyReply allForward
|
