ಕೋಲಾರ :  ಸಹಕಾರ ಕ್ಷೇತ್ರದಿಂದ ಮಾತ್ರ ರೈತರು ಹಾಗೂ ಮಹಿಳೆಯರ ಸಬಲೀಕರಣ ಸಾಧ್ಯವೆಂಬುದನ್ನು ಅರಿತು ಡಿಸಿಸಿ ಬ್ಯಾಂಕಿನಲ್ಲೇ ನಿಮ್ಮ ಠೇವಣಿ ಹಣವಿಟ್ಟು ಶಕ್ತಿ ತುಂಬಿ ಎಂದು ಮಹಿಳೆಯರು ಹಾಗೂ ರೈತರಿಗೆ ಶಾಸಕ ಕೆ.ಶ್ರೀನಿವಾಸಗೌಡ ಕರೆ ನೀಡಿದರು. ಶುಕ್ರವಾರ ತಾಲ್ಲೂಕಿನ ಮಂಗಸಂದ್ರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 55 ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು 1.5 ಕೋಟಿ ರೂ ಸಾಲದ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಶೂನ್ಯ ಬಡ್ಡಿ ಸಾಲ ಸೌಲಭ್ಯ ಒದಗಿಸುವ ಮೂಲಕ ಪ್ರತಿ ಹಂತದಲ್ಲೂ ರೈತರ ನೆರವಿಗೆ ಬರುತ್ತಿರುವುದು ಸಹಕಾರಿ ಬ್ಯಾಂಕ್‍ಗಳು ಎಂದ ಅವರು, ವಾಣಿಜ್ಯ ಬ್ಯಾಂಕ್‍ಗಳು ರೈತರಿಂದ ಠೇವಣಿ ಪಡೆದು ಶ್ರೀಮಂತರಿಗೆ ಸಾಲ ನೀಡುತ್ತದೆ, ಬಡವರು ಸಾಲಕ್ಕಾಗಿ ಬ್ಯಾಂಕ್ ಬಳಿಗೆ ಹೋದರೆ ಕತ್ತಿಡುದು ಹೊರನುಕುತ್ತಾರೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದವರೆಗೂ ಸಹಕಾರಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು ಬೆಳೆಯುವ ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿವೆ ಇದರ ಪ್ರಯೋಜನ ಪಡೆದುಕೊಳ್ಳಲು ರೈತರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಬ್ಯಾಂಕಿನ ಆಡಳಿತ ಮಂಡಳಿ ರಚನೆಯಾದಾಗ ದಿವಾಳಿಯಾಗಿದ್ದ ಬ್ಯಾಂಕ್ ಇಷ್ಟೊಂದು ದೊಡ್ಡಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂಬ ನಂಬಿಕೆ ನನಗಂತೂ ಇರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಗೋವಿಂದಗೌಡರು ಅಧ್ಯಕ್ಷರು ಆಗಬಾರದು ಎಂಬ ಉದ್ದೇಶದಿಂದ ಒಬ್ಬ ಅಭ್ಯರ್ಥಿಯನ್ನು ಚುನಾವಣೆಗೆ ನಾನೇ ಕಣಕ್ಕಿಳಿಸಿದ್ದೆ ಎಂದ ಅವರು, ಆದರೆ ಗೋವಿಂದಗೌಡರು ಗೆದ್ದರು, ಅವರ ಆಡಳಿತ ಮಂಡಳಿಯ ಸತತ ಪ್ರಯತ್ನದಿಂದ ರಾಜ್ಯಮಟ್ಟದಲ್ಲಿಯೇ ಬ್ಯಾಂಕ್ ಇಂದು ಪ್ರಥಮ ಸ್ಥಾನ ಪಡೆದುಕೊಂಡಿರುವುದು ಸ್ವಾಗತಾರ್ಹ ಎಂದರು.

28kolar1
ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದು. ಪಡೆದುಕೊಂಡಿರುವ ಸಾಲವನ್ನು ಸದಿದ್ದೇಶಕ್ಕೆ ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಸಾಲ ಪಾವತಿ ಮಾಡದಿದ್ದರೆ ಬೇರೆಯವರಿಗೆ ಮೋಸ ಮಾಡಿದಂತಾಗುತ್ತದೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಯಾವ ಬ್ಯಾಂಕಿನವರು ಮುಂದೆ ಬರುವುದಿಲ್ಲ. ಮಹಿಳೆಯರು ಬ್ಯಾಂಕಿಗೆ ಶಕ್ತಿ ತುಂಬಲು ಹಣಕಾಸಿನ ವಾಹಿವಾಟು ಇದೇ ಬ್ಯಾಂಕಿನಲ್ಲಿ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು. ಭೂಗಳ್ಳರು,ಭ್ರಷ್ಟರನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂಡಗೌಡ ಮಾತನಾಡಿ, ಮಹಿಳೆಯರು ಇನ್ನಾದರೂ ಎಚ್ಚೆತ್ತು ಚುನಾವಣೆಗಳಲ್ಲಿ ಹೊರಗಿನಿಂದ ಬಂದು ಹಣ ನೀಡುವ ವ್ಯಕ್ತಿಗಳನ್ನು ತಿರಸ್ಕರಿಸಬೇಕು ಎಂದು ಕಿವಿ ಮಾತು ಹೇಳಿದರು.

ಹಿಂದಿನಿಂದ ಪ್ರತಿಯೊಂದು ಚುನಾವಣೆಯನ್ನು ಗಮನಿಸುತ್ತಿದ್ದೇನೆ, ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಿಂದ ಬಂದು ಚುನಾವಣೆಗೆ ನಿಲ್ಲುವ ಭೂಗಳ್ಳರು, ಭ್ರಷ್ಟರು ನೀಡುವ ಹಣ ಪಡೆದು ಗೆಲ್ಲಿಸಬಾರದು. ಜಿಲ್ಲೆಯಲ್ಲಿ ಸಿ.ಬೈರೇಗೌಡ, ವೆಂಕಟಗಿರಿಯಪ್ಪ, ಎಂ.ವಿ.ಕೃಷ್ಣಪ್ಪ ಅವರು ಆಳ್ವಿಕೆ ನಡೆಸಿದ ಇತಿಹಾಸ ಇದೆ ಎಂದು ತಿಳಿಸಿ, ಅವರ ಕನಸು ನನಸಾಗಿಸಲು ಮಹಿಳೆಯರು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು. ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬಂದು ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಅವರಿಂದ ಕ್ಷೇತ್ರವೂ ಅಭಿವೃದ್ದಿಯಾಗುವುದಿಲ್ಲ, ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಬ್ಯಾಂಕಿನಿಂದ ನೀಡಿರುವ ಸಾಲಕ್ಕಿಂತ ಠೇವಣಿ ಹಣ ತೀರ ಕಡಿಮೆಯಿದೆ. ರೈತರು ಹೆಚ್ಚಾಗಿ ಸಾಲಕ್ಕಾಗಿ ಡಿಸಿಸಿ ಬ್ಯಾಂಕಿಗೆ ಬರುತ್ತಾರೆ, ಆದರೆ ಠೇವಣಿ ಮಾಡುವುದು ವಾಣಿಜ್ಯ ಬ್ಯಾಂಕಿನಲ್ಲಿ. ಖಾಸಗಿ ಬ್ಯಾಂಕಿನವರು ರೈತರಿಗೆ ಸಾಲ ಕೊಡುವುದಿಲ್ಲ, ಅವರು ಏನಿದ್ದರೂ ಶ್ರೀಮಂತರಿಗೆ ಸಾಲ ಕೊಟ್ಟು ದೇಶ ಬಿಟ್ಟು ಹೋಗುವಂತೆ ಮಾಡುತ್ತಾರೆ, ಇಲ್ಲಿ ರೈತರ ಹಣಕ್ಕೂ ರಕ್ಷಣೆ ಇರುವುದಿಲ್ಲ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ, ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸ್ಥಿತಿವಂತರ ರೈತರು ಇದ್ದಾರೆ. ತಮ್ಮ ಬಳಿ ಇರುವ ಉಳಿತಾಯ ಹಣವನ್ನು ಬ್ಯಾಂಕಿನ ಠೇವಣಿ ಇಟ್ಟು ಬೇರೆಯವರಿಗೆ ಸಾಲದ ಸೌಕರ್ಯ ಕಲ್ಪಿಸಲು ಸಹಕಾರ ನೀಡಬೇಕು ಎಂದು ಕೋರಿದರು. ಈಗಾಗಲೇ ಬ್ಯಾಂಕ್‍ವತಿಯಿಂದ ಠೇವಣಿ ಸಂಗ್ರಹಣಾ ಸಭೆ ನಡೆಸಿದ್ದು ಸಾಕಷ್ಟು ಮಂದಿ ಠೇವಣಿ ಇಡಲು ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿನ ಬಡವರ ಹಿತದೃಷ್ಟಿಯಿಂದ ಎಸ್‍ಎಫ್‍ಸಿಎಸ್ ಸಂಘಗಳಲ್ಲಿ ಇರುವ ಉಳಿತಾಯ ಹಣ ಠೇವಣಿ ಇಡಲು ಸೂಚಿಸಿದ್ದು, ಮಹಿಳಾ ಸಂಘಗಳು ಇದಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ 55 ಸಂಘಗಳಿಗೆ 1.5 ಕೋಟಿ ಸಾಲ ವಿತರಣೆ ಮಾಡಲಾಯಿತು. ಮಂಗಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಬ್ಯಾಂಕಿನ ನಿರ್ದೇಶಕ ಅನಿಲ್‍ಕುಮಾರ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ವ್ಯವಸ್ಥಾಪಕ ಅಂಬರೀಷ್ ಮೇಲ್ವಿಚಾರಾಕ ಅಮಿನ್, ಸೀನಪ್ಪ ಹಾಜರಿದ್ದರು ಕೋಲಾರ ತಾಲ್ಲೂಕಿನ ಮಂಗಸಂದ್ರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 55 ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಸಕ ಕೆ.ಶ್ರೀನಿವಾಸಗೌಡ ಸುಮಾರು 1.5 ಕೋಟಿ ರೂ ಸಾಲದ ಚೆಕ್‍ಗಳನ್ನು ವಿತರಿಸಿದರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *