ಕೋಲಾರ : ನಮ್ಮ ಭಾರತೀಯ ಯುವಸಮೂಹ ವ್ಶೆಜ್ಷಾನಿಕ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದಾಗ ನಮ್ಮ ಭಾರತ ದೇಶ ಪ್ರಪಂಚದಲ್ಲಿ ವಿಶ್ವಗುರು ಸ್ಥಾನ ಪಡೆದುಕೂಳ್ಳಲು ಸಾಧ್ಯವಾಗುತ್ತದೆ ಎಂದು ಇಸ್ರೋ ಮಾಜಿ ಅದ್ಯಕ್ಷರಾದ  ಡಾ|| ಎ ಎಸ್ ಕಿರಣ್ ಕುಮಾರ್‍ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು  ಯಲ್ದೂರು ಗ್ರಾಮದ ನ್ಯಾಷನಲ್ ಇಂಗ್ಲೀಷ್ ಮೀಡಿಯಂ ಹೈಯರ್ ಪ್ರೈಮರಿ ಶಾಲೆಯನೂತನ ಶಾಲಾಕೊಠಡಿಗಳನ್ನು ಉದ್ಟಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ತಮ್ಮ ಗುರಿ ಸಾಧನೆ ಮಾಡಿದಾಗ ತಮ್ಮ ಸ್ವಾರ್ಥಕಲ್ಲದೆ ಸಮಾಜದ ಹಿತಕ್ಕಾಗಿ ಶ್ರಮಿಸಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಪಲಿತಾಂಶ ಪಡೆಯಬೇಕು. ಇಡೀ ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಚಂದ್ರನಲ್ಲಿ ನೀರಿನಕಣಗಳೀವೆ ಎಂದು ನಮ್ಮ ದೇಶದ ಚಂದ್ರಯಾನ 1 ರಿಂದ ತಿಳಿಯಲು ಸಾದ್ಯವಾಯಿತು ಎಂದು ತಿಳಿಸಿದರು.

IMG20190927113247

ಈ ಸಂದರ್ಭದಲ್ಲಿ ದಿ ನ್ಯಾಷನಲ್ಎ ಜುಕೇಷನ್ ಸೊಸೈಟಿ ಅಪ್ ಕರ್ನಾಟಕದ ಅಧ್ಯಕ್ಷರಾದ ಡಾ||ಎ ಎಚ್ ರಾಮರಾವ್ಮಾ ತಾನಡುತ್ತಾ, ಶ್ರೀ ಡಾ|| ಎ ಎಸ್ ಕಿರಣ್ಕು ಮಾರ್ ರವರು ನಮ್ಮ ದೇಶಕಂಡ ಅಪ್ರತೀಮ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು ಇವರು ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಶಾಲೆಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ತಿಳಿಸಿದರು. ಈ ಸಮಾರಂಭದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕರಯಾಗಿರುವ ಎಲ್ಲಾವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ನ್ಯಾಷನಲ್ಎ ಜುಕೇಷನ್ ಸೊಸೈಟಿ ಅಪ್ ಕರ್ನಾಟಕದ ಕಾರ್ಯದರ್ಶಿಯಾದ ಪ್ರೋ|| ಎಸ್ ಎನ್ನಾ ಗರಾಜ ರೆಡ್ಡಿ, ಶಾಲಾ ಮುಖ್ಯಶಿಕ್ಷಕರಾದ ಎಚ್ ಎಂ ರಾಮಾಂಜಿನಪ್ಪ, ರೇಖಾ, ಲೋಕನಾಥ್,ದಕ್ಷಿಣಾಮೂರ್ತಿ, ಮೇಡಿಕಲ್ ಸ್ಟೋರ್ ಬಾಬು ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *