ಕೈಕಂಬ: ಎಸ್ ಎಸ್ ಎಪ್ ದ.ಕ ಬ್ಲಡ್ ಸೈಬೋ ಇದರ 121ನೇ ಬ್ಲಡ್ ಕ್ಯಾಂಪ್, ಎಸ್ ಎಸ್ ಎಪ್ ಅಮ್ಮುಂಜೆ ಸೆಕ್ಟರ್ ಅಧೀನದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಫಲ್ಗುಣಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಲ್ಲೂರುನಲ್ಲಿ ಇತ್ತಿಚೇಗೆ ನಡೆಯಿತು.

 

ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳ್ ಮಲ್ಲೂರು ದುವಾ ನೆರವೇರಿಸಿದರು. ಅಸಾಸ್ ಸಂಸ್ಥೆಯ ಚೇಯರ್ ಮ್ಯಾನ್ ಎಂ ಪಿ ಎಂ ಅಶ್ರಫ್ ಸ ಅದಿ ಮಲ್ಲೂರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ಬು ಮಾಡಿದರು. ಎಸ್ ಎಸ್ ಎಪ್ ಅಮ್ಮುಂಜೆ ಸೆಕ್ಟರ್ ಅಧ್ಯಕ್ಷರಾದ ಸೈಫುಲ್ಲಾ ಸಖಾಫಿ ಬಡಕಬೈಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ಎಸ್ ಎಪ್ ಮೂಡಬೆದ್ರೆ ಡಿವಿಶನ್ ನಜೀಬ್ ಅಹ್ಮದ್ ಕೈಕಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಎಸ್ ಎಸ್ ಎಪ್ ಮೂಡಬೆದ್ರೆ ಡಿವಿಶನ್ ಅಧ್ಯಕ್ಷ ರಿಯಾಝ್ ಸ ಅದಿ ಗುರುಪುರ, ದ.ಕ ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್,ಎಸ್ ಎಸ್ ಎಪ್ ಮೂಡಬೆದ್ರೆ ಡಿವಿಶನ್ ಇದರ ಬ್ಲಡ್ ಸೈಬೋ ಕನ್ವೀನರ್ ಆದ ನೌಫಲ್ ಇಂಜಿನಿಯರ್ ದೆಮ್ಮಲೆ, ಮಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಹಸನ್ ಬಾವು ಮಲ್ಲೂರು, ಪತ್ರಕರ್ತ ಜಬ್ಬಾರ್ ಮಲ್ಲೂರು, ಹಾಗೂ ಇತರ ಸಂಘ ಸಂಸ್ಥೆಯ ಕಾರ್ಯಕರ್ತರು ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದರು.

ಶಿಬಿರದಲ್ಲಿ ಒಟ್ಟು 60 ಯೂನಿಟ್ ರಕ್ತ ಶೇಖರಣೆಯಾಗಿದ್ದು,ಮಲ್ಲೂರು ವ್ಯಾಪ್ತಿಯಿಂದ 35, ಉದ್ದಬೆಟ್ಟು ವ್ಯಾಪ್ತಿಯಿಂದ 2, ಅಬ್ಬೆಟ್ಟು ವ್ಯಾಪ್ತಿಯಿಂದ 9, ಅಮ್ಮುಂಜೆ ವ್ಯಾಪ್ತಿಯಿಂದ 12, ಬಡಕಬೈಲ್ ವ್ಯಾಪ್ತಿಯಿಂದ 2 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ವಿಶೇಷವೆನೆಂದರೆ ಕಳೆದ ಬಾರಿ ಎಸ್ ಎಸ್ ಎಪ್ ದ.ಕ ಬ್ಲಡ್ ಸೈಬೋ ಇದರ ಆಶ್ರಯದಲ್ಲಿ ಟೌನ್ ಹಾಲ್ ನಲ್ಲಿ ಆಗಸ್ಟ್ 18 ರಂದು ನಡೆದ 100 ನೇ ರಕ್ತದಾನ ಶಿಬಿರದಲ್ಲಿ ರಕ್ತ ದಾನ ಮಾಡಿದ 5 ಮಂದಿ ಕಾರ್ಯಕರ್ತರು, 40 ದಿನಗಳ ಅಂತರದಲ್ಲಿ 2ನೇ ಬಾರಿ ರಕ್ತದಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.ಅಮ್ಮುಂಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಖಲೀಲ್ ಅಬ್ಬೆಟ್ಟು, SSಈ ಅಮ್ಮುಂಜೆ ಸೆಕ್ಟರ್ ಬ್ಲಡ್ ಸೈಬೋ ಕನ್ವೀನರ್ ಆದ ಎಂ ಎಸ್ ಉಬೈದ್ ಮಲ್ಲೂರು, ಸೆಕ್ಟರ್ ಕಾರ್ಯಕಾರಿ ಸದಸ್ಯರಾದ ಶಮೀರ್ ಮಲ್ಲೂರು, ಮಲ್ಲೂರು ಎಸ್ ಎಸ್ ಎಪ್ ಕಾರ್ಯಕರ್ತರಾದ ಝಬೈರ್, ಹಾಗೂ ಎಂ ಎಸ್ ಸಿರಾಜ್ ರಕ್ತದಾನ ಮಾಡಿದ ಕಾರ್ಯಕರ್ತರು.

ವಿಶೇಷವಾಗಿ ಎಲ್ಲಾ ಜಾತಿ ಧರ್ಮಗಳ ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಸೌಹರ್ದತೆಯನ್ನು ಮೆರೆದರು. ಮೇರಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅನಿಲ್ ಫೆರ್ನಾಂಡಿಸ್ ಅಬ್ಬೆಟ್ಟು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿರುತ್ತಾರೆ.

ಶಿಬಿರ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಎಲ್ಲಾ ಸೆಕ್ಟರ್ ಪಧಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಎಲ್ಲಾ ಸಂಘಸಂಸ್ಥೆಗಳ ಪಧಾಧಿಕಾರಿಗಳಿಗೆ, ವಿಶೇಷವಾಗಿ ಎಸ್ ಎಸ್ ಎಪ್ ಅಮ್ಮುಂಜೆ ಸೆಕ್ಟರ್ ಬ್ಲಡ್ ಸೈಬೋ ಕನ್ವೀನರ್ ಆದ ಎಂ ಎಸ್ ಉಬೈದ್ ಮಲ್ಲೂರು, ಹಂಝ ಟಿ ಎಚ್ ತಾಳೀಪ್ಪಾಡಿ ಕಲಾಯಿ, ಹಾಗೂ ಸೆಕ್ಟರ್ ಉಪಧ್ಯಾಕ್ಷರಾದ ಮನ್ಸೂರ್ ಅಮ್ಮುಂಜೆಯವರಿಗೆ, ಹಾಗೂ ಶಮೀರ್ ಮಲ್ಲೂರು, ಸಿರಾಜ್ ಎಮ್ ಎಚ್ ಮಲ್ಲೂರು ಹಾಗೂ ತನುಮನ ಧನ ದಿಂದ ಸಹಕರಿಸಿದ ಎಲ್ಲಾರಿಗೂ ಅಭಿನಂದನೆಗಳು.
ಸ್ಥಳವಕಾಶ ಮಾಡಿಕೊಟ್ಟ ಫಲ್ಗುಣಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಲ್ಲೂರು ಇದರ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರಿಗೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ವೈಧ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದವನ್ನು ಸಲ್ಲಿಸುತ್ತಾ ಇದ್ದೇವೆ.
ರಕ್ತದಾನದ ಉದ್ಘಾಟನೆಯನ್ನು ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳ್ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಎಸ್ ಎಸ್ ಎಪ್ ಅಮ್ಮುಂಜೆ ಸೆಕ್ಟರ್ ಉಪಾಧ್ಯಕ್ಷ ಮನ್ಸೂರ್ ಅಮ್ಮುಂಜೆ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *