ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡವು ಲೊರೆಟ್ಟೊದಲ್ಲಿ ಶನಿವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಂಸ್ಕೃತಿಕ ವಿಭಾಗ ಸಹಿತ ಕ್ಲೇ ಮಾಡೆಲಿಂಗ್ ಮತ್ತು ಕಂಠಪಾಠ ವಿಭಾಗದಲ್ಲಿ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗೆದ್ದು ವಲಯ ಮಟ್ಟಕ್ಕೆ ಆಯ್ಕೆಗೊಂಡತು.
ಶಾಲಾ ಸಂಸ್ಥಾಪಕ ಶಾಂತಾರಾಮ ಶೆಟ್ಟಿ, ಸಂಚಾಲಕ ರಂಜನ್ ಕುಮಾರ್, ಆಡಳಿತಾಧಿಕಾರಿ ಸಂಕಪ್ಪ ಶೆಟ್ಟಿ, ಮುಖ್ಯಶಿಕ್ಷಕಿ ರಕ್ಷಾ ಮತ್ತಿತರರು ಇದ್ದಾರೆ.
