ಬಂಟ್ವಾಳ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಇವರನ್ನು ವಿಭಾಗ ಮಟ್ಟದ ವಿಶೇಷ ಸಾಧನೆಗಾಗಿ ಉಡುಪಿ ವಿಭಾಗ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿದರು. ವಿಭಾಗೀಯ ಅಧಿಕಾರಿ ಮಿನಿ ಐಪಿ, ಮಾರುಕಟ್ಟೆ ಅಧಿಕಾರಿ ವೆಂಕಟರಮಣ ಶೀರೂರು, ಪ್ರಾಂತೀಯ ಅಧಿಕಾರಿ ಜಗನ್ನಾಥ್, ಹಿರಿಯ ಅಧಿಕಾರಿಗಳಾದ ಅನಂತ ಪದ್ಮನಾಭ, ಸದಾನಂದ ಕಾಮತ್ ಮತ್ತಿತರರು ಇದ್ದರು.
