ಬಂಟ್ವಾಳ: ವಿದ್ಯಾರ್ಥಿಗಳನ್ನು ದಾರಿತಪ್ಪಿಸಲು ಹಲವಾರು ಮಾಧ್ಯಮಗಳಿವೆ. ಆದರೆ ಅವುಗಳನ್ನೆಲ್ಲ ಮೀರಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಿಂದಾಗುವ ಸಾಧನೆಗಳನ್ನು ಮಾಡಬೇಕು ಎಂದು ಪತ್ರಕರ್ತ ಹಾಗೂ ರಂಗಕರ್ಮಿ ಮೌನೇಶ್ ವಿಶ್ವಕರ್ಮ ಹೇಳಿದರು. ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕದ ವತಿಯಿಂದ ಎನ್.ಎಸ್.ಎಸ್. ಸ್ವಯಂಸೇವಕರಿಗಾಗಿ ‘ಸಾಮಥ್ರ್ಯಾಭಿವೃದ್ಧಿ ಚಟುವಟಿಕೆ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳನ್ನು ಬೆಳೆಸಿಕೊಳ್ಳಬೇಕು. ಸಿಗುವ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳಬೇಕು. ತಮ್ಮೊಳಗೆ ಅಡಕವಾಗಿರುವ ಸಾಮಥ್ರ್ಯವನ್ನು ಹೊರತರಲು ಪ್ರಯತ್ನಿಸಬೇಕು ಎಂದರು.
ಬಂಟ್ವಾಳ ಎಸ್.ವಿ.ಎಸ್.ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ, ಎನ್.ಎಸ್.ಎಸ್. ವಿದ್ಯಾರ್ಥಿಗಳೆಲ್ಲರೂ ಸಮಾಜಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು
ಎಂದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿಗಳಾದ ಅಪರ್ಣಾ, ಅನಿತಾ ಜೇಕಬ್, ತೇಜಸ್ವಿ, ಸುದರ್ಶನ್ ಬಿ., ಮಹಿಮಾ ಸಿ., ಮನೋಹರ ಶಾಂತಪ್ಪ ದೊಡ್ಡಮನಿ, ಶಾಲಿನಿ ಬಿ., ವಿನಯಾ ಬಿ. ಸಹಕರಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿಯರಾದ ವಿದ್ಯಾಶ್ರೀ, ಆರಾಧನಾ ಶೆಣೈ, ಅಖಿಲಾ ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕವಿತಾ ಅತಿಥಿಗಳ ಪರಿಚಯ ಮಾಡಿದರು. ಘಟಕ ನಾಯಕಿ ಶ್ರೀಜಾ ಸ್ವಾಗತಿಸಿ, ಘಟಕ ನಾಯಕ ವೈಶಾಖ್ ವಂದಿಸಿದರು. ಸ್ವಯಂಸೇವಕಿ ಮನುಶ್ರೀ ಕಾರ್ಯಕ್ರಮ ನಿರೂಪಿಸಿದರು.

