ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ಗುಉವಾರ ಸಂಜೆ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ಮುರಿದು ಬಿದ್ದು ಇಬ್ಬರು ಬಾಲಕರು ಗಾಯಗೊಂಡ ಹಿನ್ನೆಲೆಯಲ್ಲಿ
ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ಗ್ರಾಮದ ನೆತ್ರಕೆರೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನೆರಳು ನೀಡುತ್ತಿದ್ದ ಅರಳಿಕಟ್ಟೆಯ ಬೃಹತ್ ಗಾತ್ರದ ಅರಳಿಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಬಾಲಕರಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಗುರುವಾರ ನಡೆದಿದೆ.
ಗಾಯಾಳುಗಳನ್ನು ಆರನೇ ತರಗತಿ ವಿದ್ಯಾಥರ್ಿಗಳಾದ ಸ್ಥಳೀಯ ಕೊಡ್ಮಾಣ್ ನಿವಾಸಿ, ಅಬ್ದುಲ್ ಲತೀಫ್ ಎಂಬವರ ಪುತ್ರ ಹಸನಬ್ಬ ಮತ್ತು ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ ಪರಮೇಶ್ವರ ಪೂಜಾರಿ ಇವರ ಪುತ್ರ ಯತೀಶ್ ಎಂದು ಗುರುತಿಸಲಾಗಿದೆ.
ಇವರಿಬ್ಬರ ಕೈ ಮತ್ತು ಭುಜಕ್ಕೆ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮಧ್ಯಾಹ್ನ ಪರೀಕ್ಷೆಗೆಂದು ಶಾಲೆ ಮುಂಭಾಗದ ಅರಳಿ ಮರದ ಕಟ್ಟೆಯಲ್ಲಿ ಕುಳಿತು ಇವರಿಬ್ಬರೂ ಓದುತ್ತಿದ್ದ ವೇಳೆ ಬಲವಾದ ಗಾಳಿ ಬೀಸಿದಾಗ ಮರದ ಗೆಲ್ಲು ಮುರಿದು ಬಿದ್ದಿದೆ ಎನ್ನಲಾಗಿದೆ. ಇದೇ ವೇಳೆ ಜೊತೆಗಿದ್ದ ವಿದ್ಯಾಥರ್ಿನಿ ನಸೀಮಾ ಎಂಬಾಕೆಗೂ ಮರದ ಗೆಲ್ಲು ಪರಚಿದ ಗಾಯಗಳಾಗಿದ್ದು, ಇತರ ವಿದ್ಯಾಥರ್ಿಗಳು ತಕ್ಷಣವೇ ಓಡಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ತೀರಾ ಬಡತನದಿಂದ ಕೂಡಿದ ಇವರಿಬ್ಬರ ಆಸ್ಪತ್ರೆ ವೆಚ್ಚವನ್ನು ಭರಿಸಲು ಅಶಕ್ತರಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುಖ್ಯಶಿಕ್ಷಕಿ ಲೀನಾ ಡಿ’ಸೋಜ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭಾಸ್ಕರ ನೆತ್ತರಕೆರೆ, ಕಳ್ಳಿಗೆ ಗ್ರಾ.ಪಂ.ಸದಸ್ಯ ಪುರುಷ ಎನ್. ಸಾಲ್ಯಾನ್, ದಾಮೋದರ ನೆತ್ತರಕೆರೆ, ಸುಬ್ರಹ್ಮಣ್ಯ ಭಟ್, ನಾರಾಯಣ ಮೂಲ್ಯ, ಪುದು ಗ್ರಾ.ಪಂ.ಸದಸ್ಯ ಜಗದೀಶ, ತುಂಬೆ ಗ್ರಾ.ಪಂ. ಅಧಕ್ಷ ಮಹಮ್ಮದ್ ವಳವೂರು, ನಿವೃತ್ತ ಮುಖ್ಯಶಿಕ್ಷಕ ಟಿ. ಸೇಸಪ್ಪ ಮೂಲ್ಯ ಮತ್ತಿತರರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ.ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ವಳವೂರು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಟ್ವಾಳ ತಹಶೀಲ್ದಾರ್ ಬಿ.ಎಸ್. ಮಲ್ಲೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಶುಕ್ರವಾರ ಶಾಲೆಗೆ ತೆರಳಿ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
