ಕೋಲಾರ : ನಗರದಿಂದ ಬೆಂಗಳೂರಿಗೆ ಪ್ರತಿ ದಿನ ಸಂಚರಿಸುವ ಕರ್ನಾಟಕ ಸಾರಿಗೆ ಬಸ್‍ಗಳ ಮಾರ್ಗ ಬದಲಾವಣೆ ಕೋರಿ ಪ್ರಗತಿಪರ ಸಂಘಟನೆಗಳಿಂದ ಕೆ.ಎಸ್.ಆರ್.ಟಿ.ಸಿ. ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.ಹೊಸ ಬಸ್ ಸ್ಟಾಂಡ್ ಇಂದ ಟವರ್ ಮುಕಾಂತರ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಗಳಿಂದ ಹಲವಾರು ಭಾಗಗಳ ಜನರಿಗೆ ಅನಾನುಕೂಲವಾಗುತ್ತಿದೆ. ಹಾಗಾಗಿ ಈ ಭಾಗದ ಜನರಿಗೆ ಅನುಕೂಲವಾಗಲು ಸರಕಾರಿ ಬಸ್‍ಗಳೆಲ್ಲ ಟವರ್ ವೃತ್ತದಿಂದ ಡೂಮ್ಲೈಟ್ ವೃತ್ತ, ಬಂಗಾರಪೇಟೆ ಸರ್ಕಲ್ ಮಾರ್ಗವಾಗಿ ಬೆಮಲ್ ಲೇಔಟ್ ಫ್ಲೈ ಓವರ್ ಮುಕಾಂತರ ಬೆಂಗಳೂರಿಗೆ ಬಸ್ ಗಳು ಹೋಗುವಂತೆ ವಿಭಾಗಾಧಿಕಾರಿಗಳಲ್ಲಿ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ವಿಭಾಗಾಧಿಕಾರಿಗಳು ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಒಂದು ವಾರ ಸಮಯ ಕೋರಿದರು.kuruberpet venkatesh

ಮನವಿಯಲ್ಲಿ ಕೋಲಾರದ ಗಾಂಧಿನಗರ, ಕುರುಬರಪೇಟೆ, ಗೌರಿಪೇಟೆ, ಕನಕನಪಾಳ್ಯ, ಅಂಬೇಡ್ಕರ್‍ನಗರ, ಜಯನಗರ, ಗಲ್ಪೇಟೆ, ಪಾಲಸಂದ್ರ, ಪಿಸಿ ಬಡಾವಣೆ, ಕಠಾರಿಪಾಳ್ಯ, ಹಾಗೂ ಡೂಮ್ಲೈಟ್ ಸರ್ಕಲ್ ಹೀಗೆ ಈ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಬಹಳ ಅನಾನುಕೂಲವಾಗಿದೆ. ಬಹುತೇಕ ಪ್ರಯಾಣಿಕರು ಬೆಂಗಳೂರಿಗೆ ಹೋಗುವ ಬಸ್ ಅನ್ನು ಹಿಡಿದು ಬೆಂಗಳೂರಿಗೆ ಸಂಚರಿಸಲು ಸುಮಾರು 40 ರಿಂದ 50 ರೂಪಾಯಿಯನ್ನು ಆಟೋಗಳಿಗೆ ವ್ಯಯಿಸಿ ಬೆಂಗಳೂರಿಗೆ ಸಂಚರಿಸುವ ಬಸ್‍ನ್ನು ಹಿಡಯಬೇಕಿತ್ತು.

ಈ ಭಾಗದ ಪ್ರಯಾಣಿಕರು ಬೆಂಗಳೂರಿಂದ ವಾಪಾಸ್ ಹಿಂದುರಿಗುವಾಗ ರಾತ್ರಿ ಹೊತ್ತು ಸುಮಾರು ಹಣವನ್ನು ಕೊಟ್ಟರು ಸಹ ಆಟೋಗಳು ಬರದೇ, ಆಟೋಗಳು ಆ ಸಮಯದಲ್ಲಿ ಸಿಗದೇ ಪ್ರಯಾಣಿಕರು ಕಾಲ್ನಡಿಗೆಯಲ್ಲೇ ಸಂಚರಿಸಿ ಮನೆಯನ್ನು ತಲುಪುವ ಸಮಯದಲ್ಲಿ ಚೈನ್‍ಸ್ನಾಚಿಂಗ್ ರಾಬರಿ ಹೀಗೆ ಹಲವಾರು ಘಟನೆಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಂದರ್ಭ ಎದುರಾಗುತ್ತಿದೆ ಎಂದು ತಿಳಿಸಿದೆ.ತಪ್ಪಿದಲ್ಲಿ ಈ ವಿಷಯವಾಗಿ ಕೆ.ಎಸ್.ಆರ್.ಟಿ.ಸಿ. ಇಲಾಖೆಯ ಮುಂದೆ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಮನವಿಯಲ್ಲಿ ನೀಡಿದೆ.

ಈ ಸಂದರ್ಭದಲ್ಲಿ ನೀರಾವರಿ ಸಂಚಾಲಕ ಕುರುಬರಪೇಟೆ ವೆಂಕಟೇಶ್, ರೈತ ಸಂಘದ ಕಲ್ವಮಂಜಲಿ ರಾಮು ಶಿವಣ್ಣ, ನಾರಾಯಣಸ್ವಾಮಿ, ಅಹಿಂದ ಮಂಜುನಾಥ್. ಮಾನವ ಹಕ್ಕುಗಳ ಸಮಿತಿಯ ಶಿವು, ದಲಿತ ಮುಖಂಡ ಚೇತನ್ ಬಾಬು, ಬಿ ಡಿ ವೆಂಕಟೇಶ್ ಹಾಗು ಹಿರಿಯನಾಗರೀಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *