ಫರಂಗಿಪೇಟೆ : ಫರಂಗಿಪೇಟೆಯ ಸೇವಾಂಜಲಿ ವತಿಯಿಂದ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸೇವಾಂಜಲಿ ಪ್ರತಿಷ್ಠಾನದ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಮಂಗಳೂರು ವಿ.ಸ ಕ್ಷೇತ್ರದ ಶಾಸಕರು ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಯು.ಟಿ ಖಾದರ್ ರವರು ಉದ್ಘಾಟನೆಯನ್ನು ನೆರವೇರಿಸಿದರು.

33f7eb11-fc80-40a4-ab22-5820864e2859

5ddddecc-fedb-45cf-a6b2-36b10245a2f7

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್ ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾ.ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ತಾಲೂಕು ಪಂ ಮಾಜಿ ಸದಸ್ಯ ಅಸೀಫ್ ಇಕ್ಬಾಲ್, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥರಾದ ಕೃಷ್ಣಕುಮಾರ್ ಪುಂಜಾ, ದೇವದಾಸ್ ಶೆಟ್ಟಿ ಕೊಡ್ಮಾನ್, ಬಿ.ಪ್ರಕಾಶ್ ಶೆಟ್ಟಿ ತುಂಬೆ, ಉಮೇಶ್ ಶೆಟ್ಟಿ ಬರ್ಕೆ, ಗ್ರಾ.ಪಂ ಸದಸ್ಯರಾದ ಭಾಸ್ಕರ ರೈ, ಇಕ್ಬಾಲ್ ಸುಜೀರ್, ಮಹಮ್ಮದ್ ಮೋನು, ಝಾಹೀರ್ ಅಬ್ಬಾಸ್, ರಿಯಾಝ್ ಕುಂಪನಮಜಲು, ಪ್ರಮುಖರಾದ ಸುಕೇಶ್ ಶೆಟ್ಟಿ, ಪದ್ಮನಾಭ ಶೆಟ್ಟಿ ಪುಂಚಮೆ, ತಾರನಾಥ ಶೆಟ್ಟಿ ತೇವು, ಮಜೀದ್ ಪೇರಿಮಾರ್ ಹಾಗೂ ಸ್ಥಳೀಯ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *