ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿಯವರ ಮಗ ರಿತೇಶ್ ಪೂಜಾರಿ ಎರಡು ವರ್ಷದ ಹಿಂದೆ ಕಟ್ಟಿದ ಹೊಸ ಮನೆಯೊಂದು ಪ್ರಕೃತಿವಿಕೋಪಕ್ಕೆ ಸಂಪೂರ್ಣ ನೆಲಕಚ್ಚಿದೆ.
ಸುಮಾರು ಹತ್ತು ಇಪ್ಪತ್ತು ದಿನಗಳ ಹಿಂದೆ ಸುರಿಯುತಿದ್ದ ಗಾಳಿ ಮಳೆಗೆ ಪಲ್ಲಿಪಾಡಿ ಗುಡ್ಡ ಬಿರುಕು ಬಿಟ್ಟು ಮಣ್ಣು ಕಲ್ಲು ಜರಿಯುತ್ತಿದ್ದು ಸ್ತಳೀಯರು ಜಾತಿ ಭೇದ ಮರೆತು ನೂರಾರು ಮಂದಿ ಮನೆಯನ್ನು ಉಳಿಸುವ ಸಲುವಾಗಿ ಗೋಣಿ ಚೀಲದಲ್ಲಿ ಮರಳನ್ನು ತುಂಬಿ ತಡೆಗೋಡೆ ನಿರ್ಮಿಸಿದರು ಅದಿಕ ಪ್ರಮಾಣದಲ್ಲಿ ಗುಡ್ಡದ ಮಣ್ಣು ಮನೆಯ ಮೇಲೆ ಬೀಳುತ್ತಿದ್ದುದರಿಂದ ಮನೆ ಉಳಿಸಲು ಎಷ್ಠು ಪ್ರಯತ್ನ ಪಟ್ಟರು ಮನೆ ಉಳಿಸಲಾಗಲಿಲ್ಲ ರಿತಾಶ್ ಕುಟುಂಬವು ಮನೆಕಾಲಿ ಮಾಡಿ ಹತ್ತಿರದ ಸಂಭಂದಿಕರ ಮನೆಯಲ್ಲಿ ವಾಸ್ತವವಿದ್ದಾರೆ.
ಇದೀಗ ಮನೆ ಸಂಪೂರ್ಣ ಕುಸಿದು ಬಿದ್ದು ಮನೆಯ ಹಲವು ವಸ್ತುಗಳು ಜಖಂ ಗೊಂಡಿದೆ ಸುಮಾರು 25 ಲಕ್ಷ ವೆಚ್ಚದ ಮನೆ ಇದಾಗಿದ್ದು ಸಂಪೂರ್ಣ ನೆಲಕಚ್ಚಿಹೋಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಮಾಜಿ ಸಚಿವರಾದ ಬಿ ರಮಾನಾಥ ರೈ, ವಿನಯಕುಮಾರ್ ಸೊರಕೆ , ಯು .ಟಿ ಖಾದರ್ ಮುಂತಾದವರು ಬಂದು ಪರಿಹಾರ ನೀಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಂಟ್ವಾಳ ತಾಹಸೀಲ್ದಾರ್ ರಶ್ಮೀ ಆರ್ ಎಸ್ ಹಾಗೂ ಭೂಗರ್ಭ ತಜÐರು ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ

