ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಭಾರೀ ಗುಡ್ಡ ಕುಸಿಯುತ್ತಿದ್ದು, ಗುಡ್ಡದ ಮಣ್ಣಿನಿಂದ ಹಾನಿಗೀಡಾದ ಪೂವಪ್ಪ ಪೂಜಾರಿಯವರ ಪುತ್ರ ರೀತೇಶ್ ಎಂಬವರ ಮನೆಯವರು ನಿನ್ನೆ ಮನೆ ಖಾಲಿ ಮಾಡಿದ್ದಾರೆ.16pali 1

ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಗುಡ್ಡ ಕುಸಿತ ತಡೆಗೆ ರಕ್ಷಣಾ ಗೋಡೆ ನಿರ್ಮಿಸಲಾಗುವುದು ಹಾಗೂ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇವರೊಂದಿಗೆ ತಾ.ಪಂ ಸದಸ್ಯ ಯಶವಂತ ಪೂಜಾರಿ, ವೆಂಕಟೇಶ್ ನಾವಡ, ಲೋಕೇಶ್ ಭರಣಿ,ಕಿಶೋರ್ ಪಲ್ಲಿಪಾಡಿ,ಚಂದ್ರಾಹಾಶ ಪಲ್ಲಿಪಾಡಿ,ರೋಷನ್, ಪವನ್ ಕುಮಾರ್, ಗೋಪಾಲ ಬಂಗೇರಾ ಬಂಟ್ವಾಳ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಹಾಗೂ ಇತರರು ಇದ್ದರು.16palli 5

ಎಡೆಬಿಡದ ಮಳೆಗೆ ಪಲ್ಲಿಪಾಡಿ ಮೇಲ್ಭಾಗದಲ್ಲಿ ಅಧಿಕ ಪ್ರಮಾಣದ ನೀರಿನ ಒರತೆಯಿಂದ ಮನೆಯಿಂದ ಸುಮಾರು 25 ಮೀಟರ್ ಅಂತರದಲ್ಲಿ ಗುಡ್ಡದಲ್ಲಿ ಭಾರೀ ಬಿರುಕು ಬಿಟ್ಟಿದೆ. ಪರಿಣಾಮ, ಗುಡ್ಡದ ಕೆಸರು ಮಣ್ಣು ಮನೆಯತ್ತ ಹರಿಯುತ್ತಿದೆ. ಮೊನ್ನೆ ರಾತ್ರಿ ಮನೆಯೊಳಗೆ ಕೆಸರು ನೀರು ಹಾಗೂ ಮಣ್ಣು ಕುಸಿದಿತ್ತು.16palli 3

16-pali 4

16vprajesh nayakಹೊಸ ಮನೆಯ ಕಂಪೌಂಡಿನೊಳಗೆ ಇನ್ನಷ್ಟು ಗುಡ್ಡದ ಮಣ್ಣು ಬೀಳದಂತೆ ತಡೆಯಲು ಶುಕ್ರವಾರ ಬೆಳಿಗ್ಗೆ ಸ್ಥಳೀಯ ನೂರರಷ್ಟು ಮಂದಿ ಮಾನವೀಯ ನೆಲೆಯಲ್ಲಿ ಮನೆಯ ಹತ್ತಿರದಲ್ಲಿ ಮರಳಿನ ಚೀಲ ಹಾಗೂ ಕಲ್ಲುಗಳಿಂದ ತಡೆಗೋಡೆ ನಿರ್ಮಿಸಿದ್ದಾರೆ. ಇದೇ ರೀತಿ ಗುಡ್ಡ ಕುಸಿತ ಮುಂದುವರಿದರೆ ಪಲ್ಲಿಪಾಡಿಯಿಂದ ಬಿ ಸಿ ರೋಡಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಯೊಂದು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *