ಬಂಟ್ವಾಳ:ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ವತಿಯಿಂದ ಬಿ.ಸಿ.ರೋಡು ರೋಟರಿ ಕ್ಲಬ್ ಸಭಾಂಗಣದಲ್ಲಿ ಇದೇ 20ರಂದು ಬೆಳಿಗ್ಗೆ 9ಗಂಟೆಯಿಂದ ವಾರ್ಷಿಕ ಮಹಾಸಭೆ ಮತ್ತು ‘ಯಶಸ್ವಿ’ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ರಮೇಶ ಕುಮಾರ್, ಜಿಲ್ಲಾಧ್ಯಕ್ಷ ಎಸ್.ಲೋಕೇಶ ಶೆಟ್ಟಿ, ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಪ್ರಕಾಶ್ಚಂದ ನಾಯಕ್, ಶಾಖಾಧಿಕಾರಿ ಕೆ.ಪ್ರೇಮನಾಥ ರಾವ್, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ, ಸಂಪನ್ಮೂಲ ವ್ಯಕ್ತಿ ಧರಣೇಂದ್ರ ಕೆ.ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ರೋಹಿದಾಸ್ ಕುಂದರ್ ತಿಳಿಸಿದ್ದಾರೆ.
