ಬಂಟ್ವಾಳ: ಪಾಕೃತಿಕ ವಿಕೋಪದಡಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಬಂಟ್ವಾಳ ಸುತ್ತಮುತ್ತಲಿನ ಸುಮಾರು 315 ಸಂತ್ರಸ್ತರಿಗೆ ಸರಕಾರದಿಂದ ಮಂಜೂರಾದ ಕಿಟ್ ವಿತರಣೆ ಯನ್ನು ಬುಧವಾರ ಸಂಜೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿ ರದಲ್ಲಿ ವಿತರಿಸಲಾಯಿತು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ನೆರೆ ಸಂತ್ರಸ್ಥರಿಗೆ ಸರಕಾರದಿಂದ ಕೊಡಮಾಡಿದ ಮನೆ ಬಳಕೆ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಅವರು, ನೆರೆಯಿಂದ ಹಾನಿಗೀಡಾದ ಪ್ರತಿ ಮನೆಗಳಿಗೆ ಮುಖ್ಯಮಂತ್ರಿಯವರು ಈಗಾಗಲೇ ಘೋಷಿಸಿರುವ 10 ಸಾವಿರ ರೂ. ಪರಿಹಾರ ಶೀಘ್ರವಾಗಿ ಫಲಾನುಭವಿಗಳಿಗೆ ದೊರಕಲಿದೆ ಎಂದು ಹೇಳಿದರು.
ಪ್ರವಾಹದ ಸಂದರ್ಭ ತಾಲೂಕಿನ ಎಲ್ಲಾ ಅಧಿಕಾರಿಗಳು ಕರ್ತವ್ಯ ಪ್ರಜ್ಙೆ ಮೆರೆದು ಜನರ ಸ್ಥಳಾಂತರ ಮಾಡಿದ ಪರಿಣಾಮ ಬಂಟ್ವಾಳ ತಾಲ್ಲೂಕಿನ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ.ಎಂದ ಶಾಸಕರು ಪ್ರವಾಹದ ಸಂದರ್ಭ ಹಗಲು,ರಾತ್ರಿ ಎನ್ನದೆ ಕಾರ್ಯನಿರ್ವಹಿಸಿದ ತಹಶೀಲ್ದಾರ್,ಕಂದಾಯ ,ಪುರಸಭೆ,ಪೊಲೀಸ್ ಸಹಿತ ಇಲಾಖಾ ಅಧಿಕಾರಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಪಾಣೆಮಂಗಳೂರು ಹೋಬಳಿಯ 130 ಬಿ.ಕಸ್ಬಾ ಗ್ರಾಮದ 93, ಹಾಗೂ ಬಿಮೂಡ ಗ್ರಾಮದ 92 ಮಂದಿ ಸಂತ್ರಸ್ತರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್, ಅಹಾರ ಶಾಖೆಯ ಉಪತಹಶೀಲ್ದಾರ್ ವಾಸುಶೆಟ್ಟಿ, ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯಕ್, ಆಹಾರ ಶಾಖೆಯ ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಪಕಳ, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ ಬೆಂಜನ ಪದವು, ದಿವಾಕರ ಮುಗುಳಿಯ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್, ರಾಜು ಲಂಬಾಣಿ, ವಿಜೇತ ಮತ್ತಿತರರಿದ್ದರು.
