ಕೈಕಂಬ: ಬಿಜೆಪಿ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಎಂಬವರ ಸಹೋದರ ಸಂತೋಷ್ ಕೊಟ್ಟಾರಿ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲು ಯತ್ನಿಸಿದ್ದ ವಾಮಂಜೂರು ರೋಹಿ ಪುತ್ರ ಪವನ್ ತಲೆಮರೆಸಿಕೊಂಡಿದ್ದಾನೆ.
ಭೂಗತ ಪಾತಕಿ ವಾಮಂಜೂರು ರೋಹಿಯನ್ನು 2009ರ ಜುಲೈ 5ರಂದು ವಾಮಂಜೂರಿನ ಜ್ಯೋತಿನಗರ ಎಂಬಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತನ್ನ ತಂದೆಯ ಸಾವಿಗೆ ಪರೋಕ್ಷ ಕಾರಣರಾಗಿದ್ದಾನೆ ಎಂಬ ಕಾರಣಕ್ಕಾಗಿ ಈ ಹತ್ಯಾಯತ್ನ ನಡೆದಿದೆ ಎನ್ನಲಾಗುತ್ತಿದೆ. ಈತನೊಂದಿಗಿದ್ದ ಪವನ್ ಸಹಚರ ಕೂಡಾ ತಲೆಮರೆಸಿಕೊಂಡಿದ್ದಾನೆ. ಕಂಕನಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


