ಕೋಲಾರ: ಮೊಬೈಲ್ ಗೀಳಿಗೆ ತುತ್ತಾಗಿರುವ ಯುವಕ ಯುವತಿಯರು ಹಾಗೂ ವಿದ್ಯಾರ್ಥಿಗಳಲ್ಲಿ ಭಾರತ ಸೇವಾದಳ ಚಟುವಟಿಕೆಗಳ ಮೂಲಕ ರಾಷ್ಟ್ರಪ್ರೇಮ, ಮೌಲ್ಯಯುತವಾದ ನೈತಿಕ ಶಿಕ್ಷಣ ಕಲಿಸಬೇಕೆಂದು ಜಿಪಂ ಸಿಇಒ ಜಿ.ಜಗದೀಶ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಶಾಖೆ ವತಿಯಿಂದ ಶಿಕ್ಷಕರಿಗೆ ಆಯೋಜಿಸಿದ್ದ ರಾಷ್ಟ್ರಗೀತೆ, ರಾಷ್ಟ್ರಧ್ವಜ ಕುರಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.sevadala news (7)

ಸ್ವಾತಂತ್ರ್ಯ ಚಳವಳಿಗೆ ಯುವಕರ ದೊಡ್ಡ ಪಡೆಯನ್ನು ಭಾರತ ಸೇವಾದಳ ನೀಡಿದೆ. ಆದರೆ, ಇಂದಿನ ಶಿಕ್ಷಣ ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುತ್ತಿಲ್ಲ. ಬದಲಾಗಿ ಸುಲಭವಾಗಿ ಹಣ ಗಳಿಸುವ ಶ್ರಮವಹಿಸದೆ ಕುಳಿತಲ್ಲೇ ಸಂಪಾದನೆ ಮಾಡುವ ಮಾರ್ಗವನ್ನು ಕಲಿಸುತ್ತಿದೆ ಎಂದು ವಿಷಾದಿಸಿದರು.ನೈತಿಕ ಮೌಲ್ಯಗಳು ಅಧ:ಪತನಕ್ಕೆ ಹೋಗುವ ಸನ್ನಿವೇಶದಲ್ಲಿದ್ದೇವೆ. ಯುವ ಜನತೆ ದಾರಿ ತಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜದ ಭಾವಿ ಪ್ರಜೆಗಳನ್ನು ರೂಪಿಸುವ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತವಾದ ಹಾಗೂ ನೈತಿಕ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸಬೇಕೆಂದರು.

sevadala news (1)
ನಮ್ಮನ್ನು ಹಿಂಬಾಲಿಸುವವರು ಇದ್ದಾಗ ನಾಯಕರೆಸಿಕೊಳ್ಳುತ್ತೇವೆ. ಶಾಲೆಗಳಲ್ಲಿ ಮಕ್ಕಳ ಮನಸ್ಸು ಗೆದ್ದ ಶಿಕ್ಷಕರು ನಾಯಕರಾಗುತ್ತಾರೆ. ಅಂತಹ ನಾಯಕತ್ವದ ಗುಣವನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು. ಶಿಬಿರದಲ್ಲಿ ಕಲಿತ ಅಂಶಗಳನ್ನು ಮಕ್ಕಳಿಗೆ ತಲುಪಿಸಬೇಕು ಎಂದರು.ನಮ್ಮ ನಡೆ, ನುಡಿ ಒಂದಕ್ಕೊಂದು ಹತ್ತಿರದಲ್ಲಿದ್ದರೆ ನಾಯಕತ್ವವನ್ನು ಜನ ಒಪ್ಪಿಕೊಳ್ಳುತ್ತಾರೆ. ಇದನ್ನು ಪಾಲಿಸಲು ಸಾಧ್ಯವಾದರೆ ಶಿಸ್ತಿನ ಪಡೆ ಕಟ್ಟುವುದು ಸಾಧ್ಯವಾಗುತ್ತದೆ ಎಂದ ಅವರು, ಭಾರತ ಯುವಪಡೆಯನ್ನು ಹೊಂದಿರುವ ರಾಷ್ಟ್ರ. ಆದರೆ ಯುವಜನತೆಗೆ ಅಗ್ಗದ ದರದಲ್ಲಿ ಸಿಗುವ ಮೊಬೈಲ್, ಸಾಮಾಜಿಕ ಜಾಲತಾಣಗಳು ಅಮೂಲ್ಯ ಸಮಯವನ್ನು ವ್ಯರ್ಥವನ್ನಾಗಿಸುತ್ತದೆ ಎಂದು ನುಡಿದರು.sevadala news (3)

ರಾಷ್ಟ್ರಧ್ವಜ ಸಂಹಿತೆ ಬಗ್ಗೆ ಅನೇಕರಿಗೆ ತಿಳಿದಿಲ್ಲ, ದೇಶದ ಯುವಜನರಲ್ಲಿ ಧ್ವಜದ ಬಗ್ಗೆಯೂ ಗೌರವ ಕಡಿಮೆ ಆಗುತ್ತಿದೆ. ಮಾಡರ್ನ್ ಆಗುತ್ತಿದ್ದಂತೆ ಯುವ ಜನÀತೆ ದಾರಿ ತಪ್ಪುತ್ತಿವೆ. ಯುವಜನತೆಯನ್ನು ಸರಿದಾರಿಯಲ್ಲಿ ಸಾಗುವಂತೆ ಆಗಬೇಕಾದರೆ ಮೌಲ್ಯ ಶಿಕ್ಷಣ ಮಕ್ಕಳಿಗೆ ನೀಡಿ ಎಂದು ಕಿವಿ ಮಾತು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್. ಗಣೇಶ್, ಗಾಂಧೀಜಿಯವರ ಸೂಚನೆಯಂತೆ ನಾ.ಸು.ಹರ್ಡೀಕರ್ ಅವರು ಭಾರತ ಸೇವಾದಳವನ್ನು ಆರಂಭಿಸಿ ಯುವಕರಿಗೆ ತರಬೇತಿ ನೀಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ನೀಡಿದ್ದರು. ಸ್ವಾತಂತ್ರ್ಯಾ ನಂತರ ಭಾರತ ಸೇವಾದಳ ರಾಷ್ಟ್ರದ ಸೇವೆಗಾಗಿ ಮುಡುಪಾಗಿಡುವ ಸಂಕಲ್ಪವನ್ನು 1950ರಲ್ಲಿ ಬೇಲೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾಡಲಾಯಿತು.

sevadala news (5)
ಪ್ರಸ್ತುತ ಭಾರತ ಸೇವಾದಳ ಶಿಕ್ಷಣ ಇಲಾಖೆಯ ಅಡಿಯಲ್ಲಿ ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಪದವಿಪೂರ್ವ ಹಂತದವರೆಗೆ ಭಾರತ ಸೇವಾದಳದ ಘಟಕಗಳನ್ನು ಆರಂಭಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಅದರಂತೆ ಕಾಲೇಜುಗಳಲ್ಲೂ ಶಾಖೆಗಳನ್ನು ಆರಂಭಿಸಿ ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಮಾಹಿತಿ, ಸೇವಾದಳದ ಉದ್ದೇಶಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಬಿಇಒ ಕೆ.ಎಸ್. ನಾಗರಾಜಗೌಡ, ಕೈಗಾರಿಕೆ ಇಲಾಖೆ ಉಪನಿರ್ದೇಶಕ ಎನ್.ರವಿಚಂದ್ರ, ಶಿಕ್ಷಣ ಸಂಯೋಜಕ ರಾಮಕೃಷ್ಣಪ್ಪ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್. ಸುಧಾಕರ್, ತಾಲೂಕು ಅಧ್ಯಕ್ಷ ವೈ. ಶಿವಕುಮಾರ್, ತಾಲೂಕು ಸಮಿತಿ ಸದಸ್ಯ ಶ್ರೀರಾಮ್, ನಾಮಕರಣ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಜಿಲ್ಲಾ ಪ್ರತಿನಿಧಿ ವಿ.ಪಿ. ಸೋಮಶೇಖರ್, ಡಿ.ಮುನೇಶ್, ರೆಡ್ಡಪ್ಪ, ಕೆ.ಆರ್. ಮುನಿಸ್ವಾಮಿ, ಎಸ್ಸಿಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ. ನಾಗರಾಜ್ ಇತರರಿದ್ದರು.ಭಾರತ ಸೇವಾದಳ ರಾಜ್ಯ ಸಂಪನ್ಮೂಲ ವ್ಯಕ್ತಿ ಕಾಶಿನಕುಂಟೆ ಶಿಕ್ಷಕರಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಸಂಹಿತೆ ಕುರಿತು ತರಬೇತಿ ನೀಡಿದರು.

By Suddi9

Leave a Reply

Your email address will not be published. Required fields are marked *