ರಾಯಲ್ಪಾಡು : ಮಗು ತಾಯಿಯ ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಎದೆಹಾಲು ಕುಡಿಯುವುದರಿಂದ ತಾಯಿಮಗುವಿನ ಬಾಂದವ್ಯೂ ಹೆಚ್ಚುತ್ತದೆ ಎಂದು ರಾಯಲ್ಪಾಡು ವೈದ್ಯಾಧಿಕಾರಿ ಅಬ್ರಾರ್‍ಬಾಷ ತಿಳಿಸಿದರು. ರಾಯಲ್ಪಾಡಿನ ಸಮುದಾಯಭವನದಲ್ಲಿ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಉದ್ಗಾಟಿಸಿ ಮಾತನಾಡಿದರು.
ತಾಯಿಯ ಎದೆಯ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಆಹಾರ, ಮಗುವಿಗೆ ಅತಿ ಸುಲಭವಾಗಿ ಜೀರ್ಣವಾಗುತ್ತದೆ.ಮಗು ಎದೆಯ ಹಾಲು ಚೀಪುವುದರಿಂದ ಹಾಲಿನ ನಾಳಗಳು ಹಾಲನ್ನು ಹೆಚ್ಚಾಗಿ ಉತ್ಪತ್ತಿಯಾಗಿ ಎದೆಕ್ಯಾನ್ಸರ್ ಬರದಂತೆ ತಡೆಯುತ್ತದೆ ಹಾಗು ಸೌಂದರ್ಯವು ಹೆಚ್ಚುತ್ತದೆ.ಆದ್ದರಿಂದ ತಾಯಿ ಎದೆಹಾಲನ್ನು ತಪ್ಪದೇ ತಾಯಿಂದಿರು ಕುಡಿಸುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 10ಗರ್ಭಿಣಿಯರಿಗೆ ಶ್ರೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ರಾಯಲ್ಪಾಡು ವೃತ್ತದಲ್ಲಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತರಾದ ಜಿಂಕಲವಾರಿಪಲ್ಲಿ ಕೇಂದ್ರದ ನಾರಾಯಣಮ್ಮ,ಅಮ್ಮಗಾರಿಪೇಟ ಕೇಂದ್ರದ ವೆಂಕಟಲಕ್ಷ್ಮಮ್ಮ ಬೀಳ್ಕೊಡಲಾಯಿತು. ತಾಲೂಕು ಶಿಶು ಅಭಿವೃದ್ಧಿ ಹಿರಿಯ ಮೇಲ್ವಿಚಾರಕಿ ಡಿ.ಎನ್.ನಾಣಮ್ಮ,ಮೇಲ್ವಿಚಾರಕಿ ಶರಣಮ್ಮ,ರಾಯಲ್ಪಾಡು ಪ್ರಾಥಮಿಕ ಆರೋಗ್ಯಕೇಂದ್ರದ ಕಿರಿಯ ಸಹಾಯಕಿ ಲಲಿತಮ್ಮ, ಅನಿತ ಹಾಗು ರಾಯಲ್ಪಾಡು ವೃತ್ತಕ್ಕೆ ಸಂಬಂದಿಸಿದ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.
