ಬಂಟ್ವಾಳ : ಬಂಟ್ವಾಳ ಪುರಸಭೆ ಇದೇ ಮೊದಲಿಗೆ ಪ್ರಸ್ತುತ ವರ್ಷದಿಂದ ಅಂದರೆ 2019-2020 ಸಾಲಿನಿಂದಲೇ ಆಸ್ತಿ ತೆರಿಗೆಯ ಜೊತೆಯಲ್ಲೇ ಕಸ ಸಂಗ್ರಹದ ಶುಲ್ಕದಲ್ಲಿ ವಾಣಿಜ್ಯದಾರರಿಗೆ ರಿಲಿಫ್ ಮಾಡಿ ಪುರಸಭೆ ಸೋಮವಾರ ಹೊಸ ಆದೇಶ ಹೊರಡಿಸಿದೆ. ಮನೆಗಳಿಂದ ಕಸ ಸಂಗ್ರಹದ ಶುಲ್ಕದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದ್ದು,ಉಳಿದಂತೆ ವಾಣಿಜ್ಯ,ಕೈಗಾರಿಕೆ,ಮಳಿಗೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಕಡಿಮೆಗೊಳಿಸಿ ದರವನ್ನು ಪರಿಷ್ಕಿರಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರಕಾರದ ಆದೇಶದನ್ವಯ 2019 ರ ಎ.1 ರಿಂದ ಆಸ್ಥಿ ತೆರಿಗೆ ಪಾವತಿಯ ಜೊತೆಯಲ್ಲೆ ಕಸ ಸಂಗ್ರಹದ ಶುಲ್ಕವನ್ನು ಜಾರಿಗೆ ತಂದು ಪುರಸಭೆ ಪುರವಾಸಿಗಳ ಮೇಲೆ ಬರೆಯನ್ನು ಎಳೆದಿತ್ತು. ಪುರಸಭೆಯಲ್ಲಿ ಸದ್ಯ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿರುವಾಗ.ಮತ್ತು ಈ ಬಗ್ಗೆ ಪುರಸಭೆಯಲ್ಲಿ ಯಾವುದೇ ನಿರ್ಣಯ ದಾಖಲಿಸದೆ ಸರಕಾರದ ಸುತ್ತೋಲೆಯ ನೆಪದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದ ಪುರಸಭೆಯ ಆಧಿಕಾರಿಗಳ ವಿರುದ್ದ ಪುರವಾಸಿಗಳಿಂದ. ಮತ್ತು ವಿವಿಧ ಸಂಘ ಸಂಸ್ಥೆ,ಜನಪ್ರತಿನಿಧಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಮಣಿದ ಪುರಸಭಾಧಿಕಾರಿಗಳು ಮನೆಯಿಂದ ಕಸ ಸಂಗ್ರಹದ ಶುಲ್ಕವನ್ನು ಪುನರ್ ಪರಿಶೀಲಿಸಿ ದರದಲ್ಲಿ ಕೊಂಚ ಇಳಿಕೆ ಮಾಡಲಾಗಿತ್ತಾದರೂ ವಾಣಿಜ್ಯದಾರರಿಗೆ ಮಾತ್ರ ಈ ವಿಚಾರದಲ್ಲಿ ದಯೆ ತೋರಿರಲಿಲ್ಲ, ಶಾಸಕರಿಂದ ಸೂಚನೆ: ಬಳಿಕ ಜು.2 ರಂದು ಪುರಸಭೆಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕ ಯು.ರಾಜೇಶ್ ನಾಯ್ಕ್ ಅವರು ತೆರಿಗೆಯ ಜೊತೆ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ ಇದನ್ನು ತಕ್ಷಣ ಪುನರ್ ಪರಿಶೀಲಿಸುವಂತೆ ತಾಕೀತು ಮಾಡಿದ್ದರು.

ಇದೀಗ ಶಾಸಕರ ನಿರ್ದೇನದಂತೆ ಕ್ರಮ ಕೈಗೊಂಡಿರುವ ಪುರಸಭೆ ಮನೆಗಳಿಂದ 1 ರಿಂದ 850 ಚ.ಅ.ವರೆಗೆ 30 ರೂ.850 ರಿಂದ 1500 ರವರೆಗೆ 40 ರೂ.ಹಾಗೂ 1500 ಕ್ಕಿಂತ ಹೆಚ್ಚು ವೀಸ್ತೀರ್ಣದ ಮನೆಗೆ 50 ಶುಲ್ಕ. ವಿಧಿಸಿ ದರ ಪರಿಷ್ಕರಿಸಲಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ತಿಳಿಸಿದ್ದಾರೆ. ವಾಣಿಜ್ಯ ಗಳ ಪರಿಷ್ಕೃತ ಹೊಸ ದರ : ಹಾಗೆಯೇ ವಾಣಿಜ್ಯ ಕಟ್ಟಡ,ಅಂಗಡಿ,ಉಪಹಾರ ಕೇಂದ್ರ1 ರಿಂದ 100 ಚ.ಅ.ವಿಸ್ತೀರ್ಣ ಇದ್ದರೆ 50, 100 ರಿಂದ 500 ಚ.ಅ.ಗೆ65ರೂ. ,500ರಿಂದ 1000 ಚ.ಅ.ಗೆ 75ರೂ. 1000 ಕ್ಕಿಂತ ಹೆಚ್ಚಿರುವ ಚ.ಅ.ಕಟ್ಟಡಕ್ಕೆ 85 ರೂ.ನಿಗದಿಪಡಿಸಲಾಗಿದೆ. 50 ಬೆಡ್ ಇರುವ ಆಸ್ಪತ್ರಗೆ 750 ರೂ. 50 ಕ್ಕಿಂತ ಹೆಚ್ಚು ಬೆಡ್ ಇರುವ ಆಸ್ಪತ್ರೆಗೆ 1200 ರೂ. , ಬಾರ್ ಆ್ಯಂಡ್ ರೆಸ್ಟೋರೆಂಟ್ , ಲಾಡ್ಜ್ 10 ರೂಮ್ , 10ಕ್ಕಿಂತ ಹೆಚ್ಚು ರೂಮ್ ಇರುವ ಲಾಡ್ಜ್ ಹಾಗೂ ಮದುವೆ ಹಾಲ್, ಆಡಿಟೋರಿಯಂ ಗಳಿಗೆ ತಲಾ 1000 ರೂ.ವನ್ನು ವಿಧಿಸಲಾಗಿದೆ. ಪೆಟ್ರೋಲ್ ಬಂಕ್ ಗೆ 500 ರೂ.,ಮೆಡಿಕಲ್,ಸರಕಾರಿ ಕಚೇರಿ,ಬ್ಯಾಂಕ್,ಸ್ಟೀಲ್ ವೆಂಡರ್ ಗಳಿಗೆ ತಲಾ 50 ರೂ.ನಿಗದಿ ಮಾಡಲಾಗಿದ್ದು,ಮೆಟಲ್ ಶಾಪ್ ಗೆ 100 ರೂ ವನ್ನು ವಿಧಿಸಲಾಗಿದೆ. 

ಬಿಜೆಪಿ ಸ್ವಾಗತ:
ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕ ಅತಿಯಾಗಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದು, ಇದರ ಪರಿಣಾಮವಾಗಿ ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ಇದೀಗ ಪರಿಷ್ಕರಿಸಲಾಗಿದೆ. ಅಧಿಕಾರಿಗಳ ಕ್ರಮವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿಯ ಸ್ವಾಗತಿಸುತ್ತಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ತಿಳಿಸಿದ್ದಾರೆ.
2 Attachments
