ಕಲ್ಲಡ್ಕ:‘ಮಾತೃದೇವೋಭವ,ಪಿತೃದೇವೋಭವ,ಗುರುರ್ದೇವೊಭವ,ಅತಿಥಿದೇವೋಭವ’ ಎಂಬ ಶ್ಲೋಕಜೀವನದಲ್ಲಿ ಅಳವಡಿಸಿಕೊಳ್ಳುವ ಮುಖ್ಯವಾದ ವಿಷಯವಾಗಿದೆ. ಹಿರಿಯರ ಆಶಿರ್ವಾದವಿಲ್ಲದೆ ಜೀವನದಲ್ಲಿಅಭಿವೃದ್ಧಿಹೊಂದಲುಅಸಾಧ್ಯವೆಂದರು. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳದಿದ್ದರೆ ಜೀವನಅವ್ಯವಸ್ಥೆ,ಅಶಿಸ್ತಿನಿಂದ ಕೂಡಿರುತ್ತದೆ.ಇದುಜೀವನಕ್ಕೆ,ದೇಶಕ್ಕೆ ಮಾರಕಎಂದು ಹೇಳಿದರೆ ತಪ್ಪಾಗಲಾರದು.ಆದ್ದರಿಂದ ಶಿಸ್ತು, ಸಂಸ್ಕಾರವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಶಾಲೆ ಶ್ರೀರಾಮ ಎಂದುಕರ್ನಾಟಕ ಪ್ರೌಢ ಶಾಲೆ ಮಾಣಿಇಲ್ಲಿನ ನಿವೃತ್ತದೈಹಿಕ ಶಿಕ್ಷಕರಾದ ಗಂಗಾಧರರೈಯವರುಶ್ರೀರಾಮ ಪ್ರೌಢಶಾಲಾಗುರುವಂದನಾಕಾರ್ಯಕ್ರಮದಲ್ಲಿಗುರುವಂದನಾ ಸ್ವೀಕರಿಸಿ ಮಾತನಾಡಿದರು.

DSC_0501

DSC_0401
ವಿಶ್ವಗುರು ಭಾರತಗುರು ಪರಂಪರೆಗೆ ಸ್ಪೂರ್ತಿ.ತನ್ನತಪ್ಪನ್ನುತಿದ್ದುವ ಸಾಮಾನ್ಯ ವ್ಯಕ್ತಿಯಿಂದ ಹಿಡಿದು, ಪರಿಸರದ ಪ್ರಾಣಿ ಪಕ್ಷಿಗಳು ಹಾಗೂ ಎಲ್ಲಾ ಸಂಗತಿಗಳು ಗುರುವಿಗೆ ಸಮಾನ. ಕಾಗೆ ಒಗ್ಗಟ್ಟಿಗೆ,ನಾಯಿ ನಿಯತ್ತಿಗೆ, ಮರ ಪರೋಪಕಾರಕ್ಕೆಉದಾಹರಣೆ. ಇವೆಲ್ಲಾ ನಮಗೆ ನೈತಿಕ ಬದುಕನ್ನು ಕಲಿಸುವ ಗುರು.ಆದ್ದರಿಂದ ಪ್ರಾಣಿಗಳಿಗೆ ಗುರುವಿನ ಅವಶ್ಯಕತೆಯಿಲ್ಲ. ಆದರೆ ಮನುಕುಲವನ್ನುತಿದ್ದಿತೀಡಿ ಸತ್ಪ್ರಜೆಯನ್ನಾಗಿ ಮಾಡಲುಉತ್ತಮಗುರುವಿನ ಅವಶ್ಯಕತೆಇದೆ.ಆದ್ದರಿಂದಗುರುವಿಗೆಕತ್ತಲೆಕವಿದ ಮನಸ್ಸನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರವಾದಜವಾಬ್ದಾರಿಯಿದೆಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ|ಪ್ರಭಾಕರ್ ಭಟ್‍ರವರು ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‍ಎನ್., ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಂಧ್ಯಾ ಸ್ವಾಗತಿಸಿ ವಂಶಿ ನಿರೂಪಿಸಿ, ಅನಘಾ ವಂದಿಸಿದರು.

By Suddi9

Leave a Reply

Your email address will not be published. Required fields are marked *