ಬಂಟ್ವಾಳ:  ಗುರುವಾರ ರಾತ್ರಿಯಿಂದ ಸುರಿದ ಜಡಿ ಮಳೆಗೆ ಬಿ.ಸಿ. ರೋಡಿನ ಇಂದಿರಾ ಕ್ಯಾಂಟೀನ್ ನ ಒಂದು ಪಾಶ್ವ ೯ ದ ಕಂಪೌಂಡುಗೋಡೆ ಕುಸಿದುಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ‌. ಮಳೆ ನೀರು ಹರಿದುಹೋಗಲು ಸರಿಯಾದ ಚರಂಡಿಯ ವ್ಯವಸ್ಥೆಯಿಲ್ಲದೆ ನೀರು ಕಂಪೌಂಡುಗೋಡೆಯ ಪಕ್ಕವೇ ಶೇಖರಣೆಯಾಗಿ ನಿಂತ ಪರಿಣಾಮ ಗೋಡೆ ಬುಡಸಮೇತ ನೆಲಕ್ಕೆ ಕುಸಿದಿದ್ದು,  ನೀರು ಕ್ಯಾಂಟೀನಿನ ಒಳಗೂ ನುಗ್ಗಿತ್ತು.

IMG-20190719-WA0091ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ದು,ಈ ಕಂಪೌಂಡು ಗೋಡೆ ನಿರ್ಮಾಣದ ಸಂದರ್ಭವೇ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.ಕೊನೆಗೂ ಕಂಪೌಂಡುಗೋಡೆ ನಿರ್ಮಿಸಲಾಗಿತ್ತು. ಇದೀಗ ಈ ಕಂಪೌಂಡು ಗೋಡೆ ಕುಸಿದಿರುವುದರಿಂದ ಸಾರ್ವಜನಿಕರಿಂದ ಕಾಮಗಾರಿಯ ಬಗ್ಗೆ ಅನುಮಾನುಗಳನ್ನು ವ್ಯಕ್ತಪಡಿಸಿದ್ದಾರೆ.ಸುದ್ದಿ ತಿಳಿದ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

IMG-20190719-WA0092ಆದೇ ರೀತಿ ಬಿ.ಮೂಡಗ್ರಾಮದ ಕೊಡಂಗೆ ಎಂಬಲ್ಲಿ ಸುಜಾತ ಸುವರ್ಣ ಹಾಗೂವಾಲ್ಟರ್ ಕಾಸ್ತೊಲಿನ್ ಎಂಬವರ ಮನೆ ಸಮೀಪದ ಅವರಣಗೋಡೆ ಕುಸಿದಿರುವ ಬಗ್ಗೆ ವರದಿಯಾಗಿದ್ದು,ಸುಮಾರು 1 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕುರ್ಸುಗುಡ್ಡೆ ಎಂಬಲ್ಲಿಚಂದಪ್ಪ ಎಂಬವರ ಮನೆಯಂಗಳಕ್ಕೆ ಪಕ್ಕದ ಗುಡ್ಡ ಕುಸಿದು ಮನೆಗೆ ಭಾಗಶ: ಹಾನಿಯಾಗಿದ್ದು,ಸುಮಾರು 50 ಸಾ.ರೂ.ನಷ್ಟ ವುಂಟಾಗಿದೆ ಎಂದು ಅಂದಾಜಿಸಲಾಗಿದೆ.

IMG-20190719-WA0243ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಸರೋಜಿನಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಭಾಗಶ: ಹಾನಿಯಾಗಿದ್ದು,15 ಸಾ.ರೂ.ನಷ್ಟವುಂಟಾಗಿದೆ.ಮತ್ತು ಸಜೀಪನಡು ಗ್ರಾಮದಲ್ಲಿ ಶಶಿಕಲಾ ಎಂಬವರ ಮನೆಪಕ್ಕದ ಗೋಡೆ ಜರಿದು 5 ಸಾವಿರ ರೂ.ನಷ್ಟವುಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.ಧಾರಾಕಾರ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲು ನೀರಿನ ಹರಿವು ಕೊಂಚ ಏರಿಕೆಯಾಗಿದ್ದು,ತಗ್ಗುಪ್ರದೇಶದ ಗದ್ದೆ,ತೋಟಗಳಲ್ಲಿ ನೀರು ನಿಂತಿದೆ.ರಾ.ಹೆಯ ಮೆಲ್ಕಾರ್ ನ      ಪೆಟ್ರೋಲ್ ಪಂಪ್ ಬಳಿ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ಆಡಚಣೆಯಾಯಿತು.ಸ್ಥಳೀಯರು ನೀರನ್ನು ಹರಿದುಹೋಗಲು ವ್ಯವಸ್ಥೆ ಮಾಡಿಕೊಟ್ಟ ಬಳಿಕ ವಾಹನಗಳ ಸುಗಮಸಂಚಾರ  ನಡೆಸಿತು. 

By Suddi9

Leave a Reply

Your email address will not be published. Required fields are marked *