ಶ್ರೀನಿವಾಸಪುರ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಿಧನರಾದ ಪತ್ರಕರ್ತ ಎಚ್‌.ಶ್ರೀನಿವಾಸಗೌಡ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಏರ್ಪಡಿಸಲಾಗಿತ್ತು.ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ, ಸಾಹಿತಿ ಸ.ರಘುನಾಥ, ಮುಖ್ಯ ಶಿಕ್ಷಕ ಬೈರೇಗೌಡ, ಯೋಗ ಶಿಕ್ಷಕ ಕೆ.ಎಂ.ಚೌಡಪ್ಪ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎನ್‌.ಬಿ.ಗೋಪಾಲಗೌಡ,ಲೇಖಕ ಕೆ.ವಿ.ನಾಗರಾಜ್‌, ಎನ್‌.ಮುನಿವೆಂಕಟೇಗೌಡ, ಬಾಬು, ಪ್ರಭಾಕರ್‌ ಮೃತರ ಪತ್ರಿಕಾ ಸೇವೆ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥ್‌, ಮೃತರ ಕುಂಟುಂಬದ ಸದಸ್ಯರು ಹಾಗೂ ಸ್ಥಳೀಯ ಪತ್ರಕರ್ತರು ಇದ್ದರು.19svp4ep
Attachments area

 

By Suddi9

Leave a Reply

Your email address will not be published. Required fields are marked *