ಹೈದರಾಬಾದ್:  ಕೇವಲ ಒಂದು ಬಿರಿಯಾನಿಗೋಸ್ಕರ ಚೆನ್ನೈ ಟೀಂ ಹೈದರಾಬಾದ್‌‌ನಲ್ಲಿ ತಾವು ತಂಗಿದ್ದ ಹೊಟೆಲ್ ಬದಲಾಯಿಸಿದ ಘಟನೆ ನಡೆದಿದೆ.  ಮಹೇಂದ್ರ ಸಿಂಗ್ ಧೋನಿ ಎಂಡ್ ಟೀಂಗೆ ಅಂಬಾಟಿ ರಾಯುಡು ಮನೆಯಿಂದ ಹೈದರಾಬಾದ್ ಬಿರಿಯಾನಿ ಪೂರೈಕೆ ಮಾಡಲಾಗಿತ್ತು. ಆದರೆ ಮನೆಯಿಂದ ಪೂರೈಸಿದ ಬಿರಿಯಾನಿ ತಿನ್ನಲು ಚೆನ್ನೈ ತಂಡ ಕಾತುರದಿಂದ ಕಾಯುತ್ತಿತ್ತು.

DHONI

ಹೈದರಾಬಾದ್ ಬಿರಿಯಾನಿ ಎಂಬ ಹೆಸರು ಕೇಳಿ ಅವರೆಲ್ಲರ ಬಾಯಲ್ಲಿ ನಿರೂರಿತ್ತು. ಆದರೆ ಚೆನ್ನೈ ತಂಡ ತಂಗಿದ್ದ ಗ್ರಾಂಡ್ ಕಾಕತೀಯ ಹೊಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಅವಕಾಶ ನೀಡಲಿಲ್ಲ. ಹೊಟೆಲ್ ಸಿಬ್ಬಂದಿ ಹೊರಭಾಗದಿಂದ ತಂದ ಬಿರಿಯಾನಿಯನ್ನು ತಿನ್ನಲು ಬಿಡಲಿಲ್ಲ.

ಇದರಿಂದ ತೀವ್ರ ನಿರಾಶೆಗೊಂಡ ಕ್ಯಾಪ್ಟನ್ ಧೋನಿ ಮತ್ತವರ ತಂಡ ಬಿರಿಯಾನಿಗೋಸ್ಕರ ತಾಜ್ ಕೃಷ್ಣಾ ಹೊಟೆಲ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಬಿರಿಯಾನಿಯನ್ನು ಸವಿದು ಬಾಯಿಚಪ್ಪರಿಸಿದರು.

 

By suddi9

Leave a Reply

Your email address will not be published. Required fields are marked *