ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ನವದೆಹಲಿಯಲ್ಲಿ ನಡೆದ ಮಾತುಕತೆ ಫಲಫ್ರದವಾಗಿದೆ ಎಂದೇ ಹೇಳಬಹುದು. ಯಕೆಂದರೆ ಕಾಶ್ಮೀರದ ಲಡಾಖ್ ಪ್ರಾಂತ್ಯದ ಚಮರ್ ಹಾಗೂ ಡೆಮ್ಚೋಕ್ ವಲಯದಲ್ಲಿ ಅತಿಕ್ರಮ ಪ್ರವೇಶ ಮಾಡಿರುವ 1000ಕ್ಕೂ ಹೆಚ್ಚಿನ ಚೀನಾಯೋಧರು ಸ್ಥಳದಿಂದ ಕಂಬಿಕಿತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಚೀನಾ ಅತ್ಇಕ್ರಮಿಸುತ್ತಿದ್ದಂತೆ ಭಾರತದ ಕೂಡಾ ಶಸ್ತ್ರಸಜ್ಜಿತವಾಗಿ ಯುದ್ಧಕ್ಕೆ ತಯಾರಾಗಿ ನಿಂತಿತ್ತು. ಆದರೆ ನಿನ್ನೆ ನಡೆದ ಮೋದಿ-ಪಿಂಗ್ ಮಾತುಕತೆಯಲ್ಲಿ ಗಡಿ ಸಮಸ್ಯೆಯ ಬಗ್ಗೆ ಮೋದಿ ಬಲವಾದ ಹೇಳಿಕೆ ನೀಡಿದ್ದರು, ಇದರಂತೆ ಕಾರ್ಯರೂಪಕ್ಕೆ ಇಳಿದ ಚೀನಾ ಸೇನೆ ಲಡಾಕ್ ಪ್ರಾಂತ್ಯದಿಂದ ತನ್ನ ಸೇನಾ ತುಕುಡಿಗಳನ್ನು ಹಿಂದಕ್ಕೆ ಕಳುಹಿಸಿದೆ. ಇದರಿಂದಾಗಿ ಭಾರತ-ಚೀನಾದ ಮಧ್ಯೆ ಬಿಗಡಾಯಿಸಿದ್ದ ಯುದ್ಧ ಭಿತಿ ಕೊನೆಗೂ ತಪ್ಪಿದಂತಾಗಿದೆ.





