ಸಿಡ್ನಿ: ಸಾರ್ವಜನಿಕವಾಗಿ ಶಿರಚ್ಛೇದನ ಮಾಡುವ ಯೋಜನೆಯನ್ನು ಇಸಿಸ್ ಉಗ್ರರು ನಡೆಸಿದ್ದು, ಆ ಪ್ರಯತ್ನವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆಸ್ಟ್ರೇಲಿಯ ಪೊಲೀಸರು ವಿಫಲಗೊಳ್ಳಿಸಿದ್ದಾರೆ ಎಂದು ಪ್ರಧಾನಿ ಟೋನಿ ಅಬ್ಬೋಟ್ ಹೇಳಿದ್ದಾರೆ.  ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ವಿವಿಧ ಕಡೆಗಳಲ್ಲಿ ಇಂದು ಬೆಳಗ್ಗೆ ಸುಮಾರು 800 ಪೊಲೀಸರ ತಂಡ ದಾಳಿ ನಡೆಸಿದ್ದು, ಭಯೋತ್ಪಾದನೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಸಿಸ್ ಬೆಂಬಲಿಗರಾದ 15 ಮಂದಿಯನ್ನು ಬಂಧಿಸಲಾಗಿದೆ ಎಂದರು.

sydni

 ಸಾರ್ವಜನಿಕವಾಗಿ ಶಿರಚ್ಛೇದಕ್ಕೆ ಸಂಚು ನಡೆಸಿದ ಇಸಿಸ್ ಬೆಂಬಲಿಗರ ತಂಡದ ಸೂತ್ರಧಾರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಂಕಿತ ಉಗ್ರನಿಂದ ಸಾರ್ವಜನಿಕ ಸದಸ್ಯನೊಬ್ಬನ ಅಪಹರಣ ಮತ್ತು ಶಿರಚ್ಛೇದನಕ್ಕೆ ಸಂಬಂಧಿಸಿದ ಯೋಜನಾ ವರದಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪ್ರಧಾನಿ ಟೋನಿ ಅಬ್ಬೋಟ್ ಹೇಳಿದ್ದಾರೆ. ಇಸಿಸ್ ಉಗ್ರರ ದಾಳಿಗಳ ಬಗ್ಗೆ ಆಸ್ಟ್ರೇಲಿಯಾ ಎಚ್ಚರಿಕೆ ಘೋಷಿಸಿದ ಬೆನ್ನಲ್ಲೇ ಉಗ್ರರು ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಭಯೋತ್ಪಾದಕ ದಾಳಿಗಳ ಗಂಭೀರ ಸಾಧ್ಯತೆಗಳ ಬಗ್ಗೆ ಸರಕಾರ, ದೇಶದ ನಾಗರಿಕರನ್ನು ಎಚ್ಚರಿಸಿದ ಬಳಿಕ ಮೊದಲ ಬಾರಿಗೆ ಆ ಸಾಧ್ಯತೆ ಅತಿ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಇರಾಕ್ ಹಾಗೂ ಸಿರಿಯಾದಲ್ಲಿರುವ ಉಗ್ರರ ಪರ ಕೆಲಸ ಮಾಡುತ್ತಿರುವ ಆಸ್ಟ್ರೇಲಿಯನ್ನರು ದಾಳಿ ಮಾಡುವ ಸಾಧ್ಯತೆ ಇದ್ದಿದ್ದರಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು ಎಂದು ಅಬ್ಬೋಟ್ ಹೇಳಿದರು.

By suddi9

Leave a Reply

Your email address will not be published. Required fields are marked *