ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದ ಬಂಟ್ವಾಳ ಮಿನಿ ವಿಧಾನಸೌಧದ ಮುಖ್ಯ ಆಕರ್ಷಣೆಯಾಗಿದ್ದ ಕಳೆದ ಲಿಫ್ಟ್ ಒಂದು ತಿಂಗಳಿನಿಂದ ಚಾಲನೆಯಲ್ಲಿಲ್ಲದೆ ಸ್ಥಗಿತಗೊಂಡಿದೆ. ಇಡೀ ಮಿನಿ ವಿಧಾನಸೌಧ ನಿರ್ವಹಣೆಯ ಬ್ಯಾಟರಿ ಹಾಗೂ ಜನರೇಟರ್ ಆಗಾಗ್ಗೆ ಕೈಕೊಡುತ್ತಿರುವ ಕಾರಣ ಲಿಫ್ಟ್ ಚಾಲೂ ಆಗಿ ಕರೆಂಟ್ ಕೈಕೊಟ್ಟರೆ, ಜನರೇಟರ್ ಆರಂಭಿಸುವ ಸಮಸ್ಯೆ ಇದೆ. ಹೀಗಾಗಿ ಲಿಫ್ಟ್ ಕೈಕೊಟ್ಟದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಮಿನಿವಿಧಾನಸೌಧದ ಮೇಲಂತಸ್ತಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಇಡೀ ಕಟ್ಟಡದಲ್ಲಿ ಅತ್ಯಂತ ಹೆಚ್ಚು ಚಟುವಟಿಕೆಯಲ್ಲಿರುವ ಕೊಠಡಿಯಾಗಿದ್ದು,

IMG_20190515_112958ಇಲ್ಲಿಗೆ ತೆರಳುವ ಸಾರ್ವಜನಿಕರು ಲಿಫ್ಟ್ ಕೈಕೊಟ್ಟ ಕಾರಣ ಮೆಟ್ಟಿಲು ಹತ್ತಬೇಕಾಯಿತು. ಕೈಕಾಲು ಗಟ್ಟಿಮುಟ್ಟಾಗಿರುವವರು ತೊಂದರೆ ಇಲ್ಲ ಎಂದು ಹೇಳಿದರೆ, ವೃದ್ಧರು, ಮಹಿಳೆಯರು, ವಿಕಲಚೇತನರು, ಮಂಡಿ ನೋವಿನವರು ಇದರಿಂದ ತೊಂದರೆಗೆ ಒಳಗಾದರು. ಕೆಲವು ವೃದ್ಧರನ್ನು ಎತ್ತಿಕೊಂಡೇ ಹೋಗುವ ಪ್ರಸಂಗವೂ ಇಲ್ಲಿ ಸಾಮಾನ್ಯ ದೃಶ್ಯವಾಗಿದೆ ಎಂದು ಸ್ಥಳೀಯರಾದ ಮಹಮ್ಮದ್ ನಂದಾವರ ಹೇಳಿದರು. ಅವ್ಯವಸ್ಥೆ ಯ ತಾಣ ; ಮಿನಿವಿಧಾನ ಸೌಧದ ಅವ್ಯವಸ್ಥೆಯಿಂದ ಕೂಡಿದ್ದು ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ.ಚುನಾವಣೆ ಮುಗಿದರೂ ಮಾದರಿ ನೀತಿ ಸಂಹಿತ ಇನ್ನು ಜಾರಿಯಲ್ಲಿರುವುದರಿಂದ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ವಿಶೇಷವೆಂದರೆ ವಿದ್ಯುತ್ ಕಡಿತಗೊಂಡ ದಿನಗಳಲ್ಲಂತು ಇಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ.ಜನರೇಟರ್ ಇದ್ದರೂ ಡೀಸೆಲ್‌ ಹಾಕಲು ಹಣದ ಸಮಸ್ಯೆ ..ಖುದ್ಕು ಶಾಸಕರು ಮಧ್ಯಪ್ರವೇಶಿಸಿ ಜನರೇಟರ್ ಸ್ಟಾಟ್೯ ಆಗಿತ್ತು..ಇಲ್ಲಿನ ಶೌಚಾಲಯ ನಿರ್ವಹಣೆಯಿಲ್ಲದೆ ಸುದ್ದಿಯಾಗಿತ್ತು.

(ಕ್ವೋಟ್)
ಲಿಫ್ಟ್ ಇಲ್ಲದೆ ಇಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕಾದರೆ ಪ್ರಯಾಸಪಡಬೇಕಾದ ಸ್ಥಿತಿ ಇದೆ.

– ಹಾರೂನ್ ರಶೀದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕ

By Suddi9

Leave a Reply

Your email address will not be published. Required fields are marked *